ಪಧವೀಧರ ಕ್ಷೇತ್ರದಿಂದ ದಿನೇಶ್ ಸ್ವತಂತ್ರ ಸ್ಪರ್ಧೆ

s.p.dinesh nomination filed in parishad election
ನೈಋತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಸ್.ಪಿ.ದಿನೇಶ್ ನಾಮಪತ್ರ ಸಲ್ಲಿಸಿದರು. ಹನುಮಂತಪ್ಪ ಕಲ್ಮನೆ, ರಮೇಶ್ ಬಾರಗಿ, ವಿನೋದ್ ಚಂದ್ ಪೀಟರ್, ಸದಾಶಿವ ಇದ್ದರು.
Published on

ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿಯಾಗಿ ಕಾಂಗ್ರೆಸ್‌ನ ಜಿಲ್ಲಾ ಉಪಾಧ್ಯಕ್ಷ ಎಸ್.ಪಿ. ದಿನೇಶ್ ಬುಧವಾರ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಬಾರಿ ಅಲ್ಪಮತಗಳ ಅಂತರದಲ್ಲಿ ಪರಾಭವಗೊಂಡಿದ್ದೇನೆ. ಶಿಕ್ಷಕರ ಮತ್ತು ಪದವೀಧರರ ಅನೇಕ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಮೂರನೇ ಬಾರಿಗೆ ಬಹುಮತದ ಆಯ್ಕೆ ಬಯಸಿದ್ದು, ನಿಮ್ಮ ಆಯ್ಕೆ ವ್ಯರ್ಥವಾಗದಂತೆ ನಿಮ್ಮೆಲ್ಲರ ಸಮಸ್ಯೆಗೆ ಧ್ವನಿಯಾಗಿ ಮೇಲ್ಮನೆಯಲ್ಲಿ ಹೋರಾಟ ಮಾಡುತ್ತೇನೆ ಎಂದರು. ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹನುಮಂತಪ್ಪ ಆರ್. ಕಲ್ಮನೆ, ರಮೇಶ್ ಬಾರಗಿ, ವಿನೋದ್ ಚಂದ್ ಪೀಟರ್, ಸದಾಶಿವ, ಈಶ್ವರ್, ರುದ್ರೇಶ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net