

ಆನೆಗುಂದಿ ಸರಸ್ವತಿ ಪೀಠ ವಿಕಾಸ ಸಮಿತಿ
ಅಧ್ಯಕ್ಷರಾಗಿ ದಿನೇಶ ಆಚಾರ್ಯ ಪಡುಬಿದ್ರಿ
ಮಂಗಳೂರು :ಆನೆಗುಂದಿ ಮಹಾಸಂಸ್ಥಾನ ಪಂಚ ಸಿಂಹಾಸನ ಸರಸ್ವತಿ ಪೀಠ ವಿಕಾಸ ಸಮಿತಿ ಅಧ್ಯಕ್ಷರಾಗಿ ದಿನೇಶ ಆಚಾರ್ಯ ಪಡುಬಿದ್ರಿ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವಾಧ್ಯಕ್ಷ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಮಹಾ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಮತ್ತು ಆಡಳಿತ ಮಂಡಳಿ ಸದಸ್ಯರ ಆಯ್ಕೆ ನಡೆಯಿತು.
ಸಮಿತಿ ಉಪಾಧ್ಯಕ್ಷರಾಗಿ ಎಸ್.ವಿ.ವೇಣುಗೋಪಾಲ ಆಚಾರ್ಯ ಬೆಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಮಂಜುನಾಥ ಅಂಬಣ್ಣ ಗಂಗಾವತಿ,ಕೋಶಾಧಿಕಾರಿಯಾಗಿ ವೇದಮೂರ್ತಿ ಸುಬ್ಬಣ್ಣ ಆಚಾರ್ಯ ಗಿಣಿಗೇರಿ, ಕಾರ್ಯದರ್ಶಿಯಾಗಿ ಮಂಜುನಾಥ ವಾಸಪ್ಪ ಬನ್ನಿಕೊಪ್ಪ, ಸಹ ಕಾರ್ಯದರ್ಶಿಯಾಗಿ ಅರವಿಂದ ವೈ ಆಚಾರ್ಯ ಬೆಳುವಾಯಿ, ಆಡಳಿತ ಮಂಡಳಿ ಸದಸ್ಯರಾಗಿ ಹರಿಶ್ಚಂದ್ರ ಎನ್. ಆಚಾರ್ಯ ಬೆಂಗಳೂರು, ಬಿ ಸೂರ್ಯಕುಮಾರ್‌ಹಳೆಯಂಗಡಿ, ಎಂ ಪೃಥ್ವಿರಾಜ್ ಕಿನ್ನಿಗೋಳಿ, ಕೆ ನಾಗೇಶ್ ಕುಮಾರ್ ಗಂಗಾವತಿ,ವಿ. ಶ್ರೀಧರ ಆಚಾರ್ಯ ವಡೇರಹೋಬಳಿ,ಲೋಕೇಶ್ ಎಂ ಬಿ ಆಚಾರ್ ಕಂಬಾರು, ಸುರೇಶ್ ಆಚಾರ್ಯ ಹೊಸಪೇಟೆ, ನಾಗರಾಜ ಆಚಾರ್ಯ ಹೊಸಪೇಟೆ, ರಾಘವೇಂದ್ರ ಆಚಾರ್ಯ ಗದಗ ಆಯ್ಕೆಯಾಗಿದ್ದಾರೆ.