

ಹೂವಿನಹಿಪ್ಪರಗಿ: ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ರಾಯವ್ವ ಪರಶುರಾಮ ಬಾಗೇವಾಡಿ ಹಾಗೂ ಉಪಾಧ್ಯಕ್ಷರಾಗಿ ಗಂಗಾಬಾಯಿ ಶಿವಲಿಂಗಪ್ಪ ಹಾಲಶೆಟ್ಟಿ ಬುಧವಾರ ಅವಿರೋಧವಾಗಿ ಆಯ್ಕೆಯಾದರು ಎಂದು ತಾಲೂಕು ಪಂಚಾಯಿತಿ ಇಒ ಪ್ರಕಾಶ ದೇಸಾಯಿ ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿಯ 22 ಸದಸ್ಯರಲ್ಲಿ 17 ಸದಸ್ಯರು ಮಾತ್ರ ಚುನಾವಣೆಯಲ್ಲಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ಸದಸ್ಯರಾದ ಬಸವರಾಜ ನೇಗಿನಾಳ, ಸಕರೆವ್ವ ಜೋಗಿ, ಚಂದವ್ವ ಜೈನಾಪೂರ, ಹಣಮಂತ ಮಾದರ, ಚಂದ್ರಬಾಗವ್ವ ಮಗ್ಗದ, ಬೊರಮ್ಮ ಕಾಮನಕೇರಿ, ಸಾಹೇಬಣ್ಣ ಗುಂಡಕರ್ಜಗಿ, ಮಾಹಾದೇವಿ ರೋಡಗಿ, ಶಿವಪ್ಪ ಹರಿಜನ, ಶಿವಲಿಂಗಪ್ಪ ವಾಲಿಕಾರ, ಸಿದ್ದನಗೌಡ ಬಿರಾದಾರ, ಅಮೋತೆಪ್ಪ ಹೊಸಮನಿ, ಗೌರವ್ವ ಮಾದರ, ಕಾಂತು ಚವ್ಹಾಣ, ತಿರುಪತಿ ಪವಾರ ಹಾಗೂ ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಮುಖಂಡ ಸಚಿನಗೌಡ ಪಾಟೀಲ ಕುದರಿಸಾಲವಾಡಗಿ, ಶಿವಣ್ಣ ಬಾಗೇವಾಡಿ, ಸದಪ್ಪಗೌಡ ರೋಡಗಿ, ವಿಜುಗೌಡ ಪಾಟೀಲ, ಮಲ್ಲಿಗೆಪ್ಪ ಗುಂಡಕರ್ಜಗಿ, ಶಂಕರಗೌಡ ಪಾಟೀಲ, ಮಾಳಪ್ಪ ಜೈನಾಪೂರ, ಶಿವಾನಂದ ಜೋಗಿ, ಶರಣು ಹಾಲಶೆಟ್ಟಿ, ಮಲ್ಲಿಕಾರ್ಜುನ ಹಾಲಶೆಟ್ಟಿ, ಪ್ರಶಾಂತ ಪಾಟೀಲ, ರಾಜು ದಿಂಡವಾರ, ಪರಶುರಾಮ ಬಾಗೇವಾಡಿ, ಶಂಕ್ರೆಪ್ಪ ಬಾಗೇವಾಡಿ, ಶಿವಕಾಂತ ಬಾಗೇವಾಡಿ ಇತರರಿದ್ದರು. ಚುನಾವಣೆ ಸಹಾಯಕ ಸಿಬ್ಬಂದಿ ಶಶಿಧರ ಪಾಟೀಲ, ಪಿಡಿಒ ಜಿ.ಜಿ.ಜೋಶಿ, ಆರ್.ಎಂ. ಕೋಲಕಾರ, ವಿಕಾಶ ಜೋಗಿ, ಮಲ್ಲಯ್ಯ ಗಣಿಮಠ, ಸಿದ್ದು ಮಟ್ಟಿ ಇದ್ದರು. ಅಧ್ಯಕ್ಷ-ಉಪಾಧ್ಯಕ್ಷರ ಬೆಂಬಲಿಗರು ಪರಸ್ಪರ ಗುಲಾಲ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.