ಕ್ರೀಡಾಕೂಟದಲ್ಲಿ ದಿಂಡೂರ ಶಾಲೆ ಉತ್ತಮ ಸಾಧನೆ

SPORTS
Published on

ರೋಣ: ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜರುಗಿದ ರೋಣ ವಲಯ ಮಟ್ಟದ ಪ್ರೌಡಶಾಲೆಯ ಕ್ರೀಡಾಕೂಟದಲ್ಲಿ ಎಲ್.ಐ. ದಿಂಡೂರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತರ ಸಾಧನೆ ಮಾಡಿದ್ದಾರೆ.

ವಾಲಿಬಾಲ್‌ನಲ್ಲಿ ಪ್ರಥಮ ಸ್ಥಾನ ಹಾಗೂ 1500 ಮೀಟರ್ ರನ್ನಿಂಗ್‌ನಲ್ಲಿ ವಾಣಿ ಚಿಕ್ಕರಡ್ಡಿ ದ್ವಿತೀಯ ಸ್ಥಾನ, 3000 ಮೀ. ರನ್ನಿಂಗ್‌ನಲ್ಲಿ ಉಮರ್ ಕೆ. ಪ್ರಥಮ, 100 ಮೀಟರ್ ರನ್ನಿಂಗ್‌ನಲ್ಲಿ ದಾವಲ್ ಇದ್ಲಿ ಪ್ರಥಮ ಹಾಗೂ ಉಮರ್ ಕೆ. ದ್ವಿತೀಯ ಸ್ಥಾನ ಪಡೆದಿದ್ದಾರೆ.

ಚಕ್ರ ಎಸೆತ, ಗುಂಡು ಎಸೆತ, ಬರ್ಚಿ ಎಸೆತದಲ್ಲಿ ಆಯಿಶಾ ತಹಸೀಲ್ದಾರ್ ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಶಶಿಧರ ಎಲ್.ದಿಂಡೂರ ಹಾಗೂ ಶಾಲೆಯ ಶಿಕ್ಷಕ ವೃಂದ ಹರ್ಷ ವ್ಯಕ್ತಪಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net