

ಮಂಡ್ಯ: ನಗರದ ಪಾಂಡುರಂಗಸ್ವಾಮಿ ದೇವಾಲಯದಲ್ಲಿ ಪಾಂಡುರಂಗ ಕ್ಷತ್ರಿಯ ಸಮಾಜ, ಪಾಂಡುರಂಗ ದೇವಸ್ಥಾನದ ವತಿಯಿಂದ 37ನೇ ವರ್ಷದ ದಿಂಡಿ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಗ್ಗೆಯಿಂದ ಕಾಕಡಾರತಿ, ಧ್ವಜಾರೋಹಣ, ದೇವತಾ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕ, ಜ್ಞಾನೇಶ್ವರಿ ಪಾರಾಯಣ, ಬೆಂಗಳೂರಿನ ಭಜನಾ ಮಂಡಳಿಯವರಿಂದ ಪಂಡರಿನಾಥನ ಅಖಂಡ ಭಜನೆ, ಪುಷ್ಪವೃಷ್ಠಿ, ಮಹಾಮಂಗಳಾರತಿ ಬಳಿಕ ಅನ್ನದಾಸೋಹ ಏರ್ಪಡಿಸಲಾಗಿತ್ತು. ಮಧ್ಯಾಹ್ನ ಭಾವಸಾರ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಭಜನಾ ಮಂಡಳಿಯಿಂದ ಪಾಂಡುರಂಗ ರುಕ್ಮಿಣಿ ಸತ್ಯಭಾಮ ದೇವತಾ ಮೂರ್ತಿಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.