ಕಲಘಟಗಿಯಲ್ಲಿ ದಿಂಡಿ ಸೋಹಳಾ ಸಂಪನ್ನ

20-klg 1 Dindi
Published on

ಕಲಘಟಗಿ: ಪಟ್ಟಣದ ಬೆಂಡಿಗೇರಿ ಓಣಿಯಲ್ಲಿನ ಶ್ರೀ ವಿಠ್ಠಲ ರುಕ್ಮಾಯಿ ದೇವಸ್ಥಾನದ 12ನೇ ವರ್ಷದ ವಿಠ್ಠಲ ರುಕ್ಮಾಯಿ ದಿಂಡಿ ಸೋಹಳಾ ಕಾರ್ಯಕ್ರಮದ ನಿಮಿತ್ತ ಶನಿವಾರ ಸಂಜೆ ಪೋತಿ ಸ್ಥಾಪನೆ ಮಾಡಲಾಯಿತು. ಬಳಿಕ ಶ್ರೀ ಮಾರುತಿ ಮಹಾರಾಜರ ನೇತೃತ್ವದಲ್ಲಿ ರಾಮನಾಮ ಜಪ, ಹರಿಪಾಠ ಹಾಗೂ ಜ್ಞಾನೇಶ್ವರಿ ಪಾರಾಯಣ ಮಾಡಲಾಯಿತು.

ಸಂತ ಮಂಡಳಿಯವರಾದ ಕಲ್ಲಪ್ಪ ಸುತಗಟ್ಟಿ, ಚಂದ್ರಕಾಂತ ಹುಲಹೊಂಡ, ವಿಠ್ಠಲ ಚಿಂತಾಮಣಿ, ಸಾತಪ್ಪ ಹುಲಿಹೊಂಡ, ಶಿವಾಜಿ ಮೋತೆನವರ, ನಾರಾಯಣ ಬಮ್ಮಿಗಟ್ಟಿ, ಫಕೀರಪ್ಪ ಮೇಟಿ, ರಾಮಣ್ಣ ತೋಟದ, ಮಾದೇವಪ್ಪ ತಡಸದ, ಹನುಮಂತ ಚವರಗುಡ್ಡ ಹಾಗೂ ಜಾತ್ರಾ ಕಮಿಟಿಯವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net