ದಿಂಡಿ ಪಾದಯಾತ್ರೆ 24ರಂದು

20Athni1
Published on

ಅಥಣಿ: 50ನೇ ವರ್ಷದ ಪಂಢರಪುರ ದಿಂಡಿ ಪಾದಯಾತ್ರೆ ಅಂಗವಾಗಿ ಪಟ್ಟಣದ ಶ್ರೀ ನಾಮದೇವ ಹರಿಮಂದಿರದಿಂದ ಅ.24ರಂದು ಬೆಳಗ್ಗೆ 8 ಗಂಟೆಗೆ ಸುಮಾರು 300ಕ್ಕೂ ಅಧಿಕ ಭಕ್ತರು ಪಾದಯಾತ್ರೆ ಮೂಲಕ ಹೊರಡಲಿದ್ದಾರೆ. 1976ರಲ್ಲಿ ಅಥಣಿ ಪಟ್ಟಣದಲ್ಲಿ ಶ್ರೀ ಗುರು ಬಾಬಾಸಾಹೇಬ ಅಜರೇಕರ ಅನುಗ್ರಹದಿಂದ ಪ್ರಾರಂಭಗೊಂಡು ಅಥಣಿ&ಪಂಢರಪುರ ದಿಂಡಿ ಪಾದಯಾತ್ರೆಗೆ 50 ವರ್ಷ ತುಂಬಿದೆ ಹಿನ್ನೆಲೆಯಲ್ಲಿ ಶ್ರೀನಾಮದೇವ ಹರಿ ಮಂದಿರದಲ್ಲಿ ವಿಶೇಷ ಪೂಜೆ, ಪ್ರಾರ್ಥನೆ, ಭಜನೆ ನಂತರ ದಿಂಡಿಯಾತ್ರೆ ಪ್ರಾರಂಭಗೊಳ್ಳುತ್ತದೆ. ದಿಂಡಿ ಕಾರ್ಯಕ್ರಮವು ಶ್ರೀ ಗುರು ಹರಿದಾಸ ರಾಮಭಾವು ಭೋರಾಟೆ ಮತ್ತು ಶ್ರೀ ಗುರು ಬಾಬಾಸಾಹೇಬ ಅಜರೇಕರ(ಮಾವುಲಿ) ಇವರ ನೇತೃತ್ವದಲ್ಲಿ ಅಥಣಿಯಿಂದ ಗೂಗವಾಡ ಮಾರ್ಗವಾಗಿ ಜತ್ತ, ಸೋನಂದ, ಯಾದವ ವಸತಿ ಬಾಮಣಿ, ದೇಶಮುಖ ತೋಟ, ಶ್ರೀಕ್ಷೇತ್ರ ಪಂಢರಪುರಕ್ಕೆ ಅ.29ರಂದು ತಲುಪಲಿದೆ ಎಂದು ಸಂಚಾಲಕ ಅಣ್ಣಾಸಾಹೇಬ ಮಿರಜಕರ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net