

ವಿಜಯವಾಣಿ ಸುದ್ದಿಜಾಲ ಧಾರವಾಡ
ಶ್ರೀ ಸದ್ಗುರು ವಾಸ್ಕರ ಮಹಾರಾಜರ ಪುಣ್ಯತಿಥಿ ಹಾಗೂ ಶ್ರೀ ವಿಠ್ಠಲ ರುಕಮಾಯಿ ಮೂರ್ತಿ ಪ್ರತಿಷ್ಠಾಪನೆ ವರ್ಷಾಚರಣೆ ಮತ್ತು ಶ್ರೀ ವಿಠೋಭಾ ದೇವರ ದಿಂಡಿ ಮಹೋತ್ಸವ ಸಮಾರಂಭ ಹೊಸಯಲ್ಲಾಪುರ ಛಾವಣಿ ಓಣಿಯ ಶ್ರೀ ವಿಠೋಭಾ ದೇವಸ್ಥಾನದಲ್ಲಿ ಸಂಭ್ರಮದಿಂದ ಜರುಗಿತು.
ಅಂದು ಬೆಳಗ್ಗೆ ಪೋತಿ ಸ್ಥಾಪನೆ, ಗ್ರಂಥಗಳ ಪೂಜೆ ಹಾಗೂ ಭಜನೆ ಮತ್ತು ಕೀರ್ತನೆ, ನಾಮಜಪ, ಪ್ರವಚನ, ಗುಲಾಲ ಜರುಗಿತು. ಸಂಜೆ ಸುಮಂಗಲೆಯರಿಂದ ಆರತಿ, ಭಜನಾ ತಂಡ, ಕಲಾಮೇಳದೊಂದಿಗೆ ದಿಂಡಿ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವ ಹೊರಟು ನಗರದ ಹೊಸಯಲ್ಲಾಪುರ ಪ್ರಮುಖ ಬಡಾವಣೆ ಮೂಲಕ ಸಂಚರಿಸಿ ಮರಳಿ ವಿಠೋಭಾ ದೇವಸ್ಥಾನಕ್ಕೆ ಆಗಮಿಸಿತು.
ಸಂತ ಮಂಡಳಿಯ ಸುಭಾಷ ಪವಾರ, ಪರಶುರಾಮ ವಾಡಕರ, ಬಸವರಾಜ ಮಟ್ಟಿ, ಸುರೇಶ ಚವ್ಹಾಣ, ತಾತು ಸೂರ್ಯವಂಶಿ, ಸಂಜಯ ಸಾಳುಂಕೆ, ಲಕ್ಷಣ್ ಚಾಬೂಕಸವಾರ, ಪವನ ಲೋಖಂಡೆ, ಭರತ ವಾಡಕರ, ಓಂಕಾರ ಮಾನೆ, ನಿಹಾಲ ಪಾಟೀಲ, ಕೌಶಿಕ ಸೂರ್ಯವಂಶಿ, ಸುರೇಶ ತಿಬೇಲಿ, ಭಕ್ತರು, ಶ್ರೀ ಮಾರುತಿ ಮಂದಿರ ಟ್ರಸ್ಟ್ ಕಮಿಟಿ ಸದಸ್ಯರು, ಇತರರು ಇದ್ದರು.