ಮುಂಬೈ ಮಹಾ ನಗರದಲ್ಲಿ ಕಾರ್ಮಿಕರ ನಾಯಕರಾಗಿದ್ದ ದಿನಕರ ದೇಸಾಯಿ

Dinakar Desayi Jayanti
Published on

ಅಂಕೋಲಾ : ದಿನಕರ ದೇಸಾಯಿ ಉತ್ತರ ಕನ್ನಡ ಜಿಲ್ಲೆ ಕಂಡ ಒಬ್ಬ ಶ್ರೀಮಂತ ನಾಯಕರಾಗಿದ್ದರು. ಮುಂಬೈನಂತಹ ನಗರದಲ್ಲಿ ಮಹಾನಗರಸಭೆಯ ಸದಸ್ಯರಾಗುವ ಮೂಲಕ ಕಾರ್ಮಿಕ ನಾಯಕರಾಗಿ ಆ ಭಾಗದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು.

ಪಟ್ಟಣದ ಜಿ.ಸಿ.ಕಾಲೇಜಿನಲ್ಲಿ ಡಾ.ದಿನಕರ ದೇಸಾಯಿ ಪ್ರತಿಷ್ಠಾನ ಹಾಗೂ ಕಸಾಪ ಅಂಕೋಲಾ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಡಾ.ದಿನಕರ ದೇಸಾಯಿ ಅವರ 116 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ದಿನಕರ ದೇಸಾಯಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ಉತ್ತರ ಕನ್ನಡ ಜಿಲ್ಲೆ ಶಿಕ್ಷಣದಿಂದ ವಂಚಿತವಾಗಿದೆ ಎಂದು ಮುಂಬೈನಲ್ಲಿರುವಾಗಲೇ ಮನಗಂಡು 1953 ರಲ್ಲಿ ಕೆನರಾ ವೆಲೇರ್ ಟ್ರಸ್ಟ್ ಸ್ಥಾಪಿಸುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ನೆರವಾದರು. ಈ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ, ವಿದೇಶದಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ಗ್ರಾಮೀಣ ಭಾಗದ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಕತಗಾಲ ಹಾಗೂ ಬೇಡ್ಕಣಿಯಲ್ಲಿ ಹೈಸ್ಕೂಲ್ ಪ್ರಾರಂಭಿಸಿದರು. ದೇಸಾಯಿಯವರು ಕಾಲೇಜ್‌ಗಳನ್ನು ಸ್ಥಾಪಿಸದೇ ಇದ್ದಲ್ಲಿ ಸಾಮಾನ್ಯ ಜನರು ಶಿಕ್ಷಣ ಪಡೆಯುವುದು ಕಷ್ಟವಾಗಿತ್ತು ಎಂದರು.

ಲೇಖಕ ಮೋಹನ ಹಬ್ಬು ಮಾತನಾಡಿದರು. ಪ್ರಾಚಾರ್ಯ ಎಸ್.ವಿ.ವಸ್ತ್ರದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಸಾಪ ತಾಲೂಕು ಅಧ್ಯಕ್ಷ ಗೋಪಾಲಕೃಷ್ಣ ನಾಯಕ, ಹಿರಿಯ ಸಾಹಿತಿಗಳಾದ ಹೊನ್ನಮ್ಮ ನಾಯಕ, ಮಹಾಂತೇಶ ರೇವಡಿ, ನಾಗೇಂದ್ರ ನಾಯಕ ತೊರ್ಕೆ, ಜೆ. ಪ್ರೇಮಾನಂದ, ಜಗದೀಶ್ ನಾಯಕ ಇದ್ದರು. ಗ್ರಂಥಪಾಲಕ ಡಾ.ನಂಜುAಡಯ್ಯ ಸ್ವಾಗತಿಸಿದರು, ಭಾಗ್ಯಶ್ರೀ ನಾಯಕ ವಂದಿಸಿದರು, ಭಾವನಾ ನಾಯಕ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net