ದಿನದ ದೀವಿಗೆ ಕೃತಿ ಬಿಡುಗಡೆ 29ರಂದು

DVD Basavaraj Madival
ಬಸವರಾಜ ಮಡಿವಾಳ
Published on

ದೇವದುರ್ಗ: ಪಟ್ಟಣದ ಖೇಣೇದ್ ಫಂಕ್ಷನ್ ಹಾಲ್‌ನಲ್ಲಿ ಜೂ.29ರಂದು ‘ದಿನದ ದೀವಿಗೆ’ ಕೃತಿ ಬಿಡುಗಡೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕೃತಿಯ ಲೇಖಕ ಬಸವರಾಜ ಮಡಿವಾಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ದೇವದುರ್ಗದ ಶೀಬೆಟ್ಟದ ಬಸವ ಪ್ರಕಾಶನವು ಪುಸ್ತಕವನ್ನು ಹೊರತಂದಿದೆ. ತಿಮ್ಮಾಪುರ ಕಲ್ಯಾಣಾಶ್ರಮದ ಡಾ.ಮಹಾಂತ ಸ್ವಾಮೀಜಿ ಸಾನ್ನಿಧ್ಯವಹಿಸುವರು.

ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ ಚಿಕ್ಕಬೂದೂರು ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ವೀರಹನುಮಾನ ಕೃತಿ ಬಿಡುಗಡೆ ಮಾಡುವರು. ಸಾಹಿತಿ ಡಾ.ಚನ್ನಬಸವ ಹಿರೇಮಠ ಕೃತಿ ಪರಿಚಯ ಮಾಡುವರು.

ದೇವದುರ್ಗ ನಾಗರಿಕರ ವೇದಿಕೆ ಅಧ್ಯಕ್ಷ ಭಾನುಪ್ರಕಾಶ ಖೇಣೇದ್, ಮುಖಂಡರಾದ ಬಸವರಾಜಪ್ಪ ವಾರದ, ಮಲ್ಲಪ್ಪ ಸಂಕೀನ, ಚಂದ್ರಶೇಖರ ಚಂದನಕೇರಿ, ಟಿಎಚ್‌ಒ ಡಾ.ಬನದೇಶ್ವರ ಇತರರು ಭಾಗವಹಿಸುವರ ಎಂದು ತಿಳಿಸಿದರು. ಮುಖಂಡರಾದ ಭೋಜರಾಜ ಮಿಣಜಗಿ, ಶಿವರಾಜ ಶಾಖೆ, ಕರಿಯಪ್ಪ ಕೊಡಗಲಿ, ಚಂದ್ರಶೇಖರ ಚಂದನಕೇರಿ, ಹನುಮಂತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net