ಪಾಲಕರಲ್ಲಿ ಕಡಿಮೆಯಾಗುತ್ತಿರುವ ಮಕ್ಕಳ ಮೇಲಿನ ಕಾಳಜಿ

26KMD-1
ಕೆ.ಎಂ.ದೊಡ್ಡಿಯ ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ವತಿಯಿಂದ ಆಯೋಜಿಸಿದ್ದ ಪ್ರಶಾಂತ್-ಕಲೋತ್ಸವ ಕಾರ್ಯಕ್ರಮವನ್ನು ಡಾ.ಎ.ಎನ್. ಪ್ರಕಾಶ್‌ಗೌಡ ಉದ್ಘಾಟಿಸಿದರು.
Published on

ಕೆ.ಎಂ.ದೊಡ್ಡಿ: ಪ್ರಸ್ತುತ ದಿನಗಳಲ್ಲಿ ಮಕ್ಕಳ ಬಗೆಗಿನ ಕಾಳಜಿ ಪಾಲಕರಲ್ಲಿ ಕಡಿಮೆಯಾಗುತ್ತಿದೆ ಎಂದು ಆಂತರಿಕ ಭದ್ರತಾ ವಿಭಾಗದ ಅಧೀಕ್ಷಕ ಡಾ.ಎ.ಎನ್. ಪ್ರಕಾಶ್‌ಗೌಡ ವಿಷಾದ ವ್ಯಕ್ತಪಡಿಸಿದರು.

ಪ್ರಶಾಂತ್ ಸ್ಕೂಲ್ ಆಫ್ ಬ್ರಿಲಿಯನ್ಸ್ ವತಿಯಿಂದ ಆಯೋಜಿಸಿದ್ದ ಪ್ರಶಾಂತ್-ಕಲೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ತಿಳಿದು ಪಾಲಕರು ತಮ್ಮ ಮಕ್ಕಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಮ್ಮ ಮಕ್ಕಳನ್ನು ನೆರೆಹೊರೆಯ ಮಕ್ಕಳೊಂದಿಗೆ ಹೋಲಿಸುವುದು ಪಾಲಕರು ಮಾಡುವ ಬಹುದೊಡ್ಡ ತಪ್ಪು. ತಮ್ಮ ಮಕ್ಕಳು ಬೇರೆಯವರಿಗಿಂತ ವಿಶೇಷ ಎಂಬುದನ್ನು ಪಾಲಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ಶಿಕ್ಷಣ ತಜ್ಞ ನಾಡೋಜ ಡಾ.ಹುಡೈ ಪಿ.ಕೃಷ್ಣ, ಜಾನಪದ ಕಲಾವಿದ ಡಾ.ಮಳವಳ್ಳಿ ಮಹದೇವಸ್ವಾಮಿ, ಸಂಸ್ಥೆ ಅಧ್ಯಕ್ಷ ಡಾ.ಜಯಪ್ರಕಾಶ್, ಬಿಇಒ ಸಿ.ಎಚ್.ಕಾಳೀರಯ್ಯ, ನಿವೃತ್ತ ಬಿಇಒ ಕಾಂತರಾಜು, ರೈತ ಮುಖಂಡ ಅಣ್ಣೂರು ಮಹೇಂದ್ರ, ರೈತ ಕವಿ ದೊ.ಚಿ.ಗೌಡ, ನಿರ್ದೇಶಕರಾದ ದಿವ್ಯಾ ಪ್ರಶಾಂತ್, ಕಾರ್ಕಹಳ್ಳಿ ಬಸವರಾಜು, ದೇವರಹಳ್ಳಿ ಭಾಸ್ಕರ್, ತೋಸಿಫ್, ಬಾಲಸುಬ್ರಮಣ್ಯ, ಮಹದೇವು ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net