ಡಿಮ್ಹಾನ್ಸ್ ನಿರ್ದೇಶಕರಾಗಿ ಡಾ. ಅರುಣಕುಮಾರ ನೇಮಕ

h29-dr.arunkumar
Published on

ಹುಬ್ಬಳ್ಳಿ: ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ (ಡಿಮ್ಹಾನ್ಸ್) ನಿರ್ದೇಶಕರನ್ನಾಗಿ ಡಾ. ಅರುಣಕುಮಾರ ಚವ್ಹಾಣ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಜ. 31ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ.

ಡಾ. ಅರುಣಕುಮಾರ ಸಿ. ಅವರು ಕಳೆದ ನಾಲ್ಕು ವರ್ಷಗಳಿಂದ ಕಿಮ್ಸ್​ನಲ್ಲಿ ವೈದ್ಯಕೀಯ ಅಧೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಾ. ಮಹೇಶ ದೇಸಾಯಿ ಅವರು ಡಿಮ್ಹಾನ್ಸ್ ನಿರ್ದೇಶಕರಾಗಿದ್ದರು. ಅವರ ಸ್ಥಳಕ್ಕೆ ಡಾ. ಅರುಣಕುಮಾರ ಚವ್ಹಾಣ ಅವರನ್ನು ನೇಮಕ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net