ಆಯಾಮ ಅಕಾಡೆಮಿ ಆಫ್‌ಲೈನ್ ಆರ್ಟ್ಸ್ ಆಯಾಮೋತ್ಸವ

Drama-games
Published on

ಮೈಸೂರು: ಆಯಾಮ ಅಕಾಡೆಮಿ ಆಫ್‌ಲೈನ್ ಆರ್ಟ್ಸ್ ವತಿಯಿಂದ ಸೆ.29 ರಿಂದ ಅ.1ರವರೆಗೆ ಮೂರು ದಿನಗಳ ಆಯಾಮೋತ್ಸವವನ್ನು ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕಿ ಡಾ.ಎಸ್.ವಿ.ಶಾಂಭವಿಸ್ವಾಮಿ ತಿಳಿಸಿದರು.


ಅಂದು ಸಂಜೆ 5ಕ್ಕೆ ನಡೆಯುವ ಪುಸ್ತಕ ಪ್ರದರ್ಶನದ ಉದ್ಘಾಟನೆಯನ್ನು ಹಿರಿಯ ರಂಗ ನಿರ್ದೇಶಕ ಕೆ.ಶಿವಲಿಂಗಯ್ಯ ನೆರವೇರಿಸಲಿದ್ದು, ಚಿತ್ರಕಲಾ ಪ್ರದರ್ಶನವನ್ನು ರಂಗಾಯಣ ಜಂಟಿ ನಿರ್ದೇಶಕಿ ನಿರ್ಮಲಾ ಮಠಪತಿ ಉದ್ಘಾಟಿಸಲಿದ್ದಾರೆ. ನಂತರ ಸಂಜೆ 6ಕ್ಕೆ ನಡೆಯಲಿರುವ ಆಯಾಮೋತ್ಸವ ಉದ್ಘಾಟನೆಯನ್ನು ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಯ ಉಪ ಕುಲಪತಿ ಪ್ರೊ.ನಾಗೇಶ್.ವಿ ಬೆಟ್ಟಕೋಟೆ ಮಾಡಲಿದ್ದು, ಸಮಾರಂಭದಲ್ಲಿ ಹಿರಿಯ ನೃತ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಉಪಸ್ಥಿತರಿರಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.30ರಂದು ಬೆಳಗ್ಗೆ 9.30ಕ್ಕೆ ನಡೆಯಲಿರುವ ನಾಟ್ಯ ವಿದ್ಯಾರ್ಥಿಗಳು ಮತ್ತು ಶಾಸ್ತ್ರ ಅಧ್ಯಯನ ಎಂಬ ವಿಚಾರಸಂಕಿರಣದಲ್ಲಿ ಹಿರಿಯ ನೃತ್ಯ ಕಲಾವಿದೆ ಡಾ.ತುಳಸಿ ರಾಮಚಂದ್ರ ಹಾಗೂ ಪ್ರೊ.ನಾಗೇಶ್ ಬೆಟ್ಟಕೋಟೆ ವಿಷಯ ಮಂಡನೆ ಮಾಡಲಿದ್ದು, ಹಿರಿಯ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಅ.1ರಂದು ನಡೆಯುವ ನಾಟ್ಯ ಪ್ರದರ್ಶಕರು ಮತ್ತು ರಂಗ ಸಂಯೋಜನೆಯ ತಿಳಿವಳಿಕೆ ಎಂಬ ವಿಚಾರ ಕುರಿತು ಹಿರಿಯ ನೃತ್ಯ ಕಲಾವಿದೆ ಡಾ.ವಸುಂಧರಾ ದೊರೆಸ್ವಾಮಿ ಹಾಗೂ ಹಿರಿಯ ರಂಗ ನಿರ್ದೇಶಕ ಮೈಮ್ ರಮೇಶ್ ವಿಷಯ ಮಂಡಿಸಲಿದ್ದು, ಹಿರಿಯ ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net