ದಿಲೀಪ್ ಕುಮಾರ್ ಧೋಕಾರಿಗೆ ಜೈನ್ ಭಗವತೀ ದೀಕ್ಷಾ

raichur
raichur
Published on

ರಾಯಚೂರು ನಗರದ ರೈತ ಭವನದಲ್ಲಿ ವರ್ಧಮಾನ ಸ್ಥಾನಕವಾಸಿ ಜೈನ್ ಸ್ರಾವಕ್ ಸಂಘದಿಂದ ವತಿಯಿಂದ ಜೈನ್ ಭಗವತೀ ದೀಕ್ಷಾ ಮಹೋತ್ಸವದಲ್ಲಿ ಬುಧವಾರ ದಿಲೀಪ್ ಕುಮಾರ ಧೋಕಾ ಅವರು ಜೈನ್ ಭಗವತೀ ಧೀಕ್ಷೆಯನ್ನು ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಆಚಾರ್ಯ ಭಗವಂತ 1008 ಶ್ರೀ ಪಾರ್ಶ್ವಚಂದ್ರ ಜೀ ಮ.ಸಾ ಅವರು ದೀಕ್ಷೆ ಭೋದನೆ ಮಾಡಿ ಜೈನ್ ಧರ್ಮದ ವಿಧಿ ವಿಧಾನಗಳ ಮೂಲಕ ದೀಕ್ಷಾ ಭೋದನೆಯ ನಂತರ ದಿಲೀಪ್ ಕುಮಾರ್ ಧೋಕಾ ಅವರಿಗೆ ಜೈ ಸುಭೋದ್ ಮುನಿರಾಜ್ ಎಂದು ಮರು ನಾಮಕರಣ ಮಾಡಿದರು.

ನಂತರ ಜೈ ಸುಭೋದ್ ಮುನಿರಾಜ್ ಮಾತನಾಡಿ, ಭಗವಂತನ ಮಾರ್ಗದಿಂದ ಮಾತ್ರ ಶಾಶ್ವತ ಹಾಗೂ ಅನಂತ ಸುಖವನ್ನು ಪ್ರಾಪ್ತಿ ಮಾಡಲು ಸಾಧ್ಯ, ಶಾಶ್ವತ ಸದುಖ ಪ್ರಾಪ್ತಿಯಾದರೆ ದುಖಃದ ಅನುಭೂತಿಯಾಗುವುದಿಲ್ಲ. ಕರ್ಮದಿಂದ ಮುಕ್ತಿ ಹೊಂದಿ ಅನಂತ ಸುಖ ಪ್ರಾಪ್ತಿಯಾಗುತ್ತದೆ. ಮನುಷ್ಯ ಭವ ಪ್ರಾಪ್ತಿ, ಜಿನವಾಣಿ ಕೇಳುವುದು, ಜಿನವಾಣಿಯನ್ನು ಶ್ರದ್ಧೆಯಿಂದ ಪಾಲಿಸುವುದು ಬಹಳ ಮುಖ್ಯವಾಗಿರುತ್ತದೆ.

ಭಗವಂತನ ಮಾರ್ಗದ ಅನುಸಾರವಾಗಿ ನಡೆದಾಗ ಪ್ರತಿಯೊಬ್ಬರ ಜೀವನ ಕಾಲದಲ್ಲಿ ಅನಂತ ಸುಖವನ್ನು ಅನುಭವಿಸಬಹುದಾಗಿದೆ. ದುಖಃ, ಕೋಪ, ಕಾಮ ಭೋಗ ಇವೆಲ್ಲ ಕ್ಷಣಿಕ ಸುಖಗಳಾಗಿದ್ದು, ನಮ್ಮ ಆತ್ಮ ಸುಖಿಸಬೇಕಾದರೆ ಭಗವಂತನ ವಾಣಿಯಲ್ಲಿ ಶ್ರದ್ಧೆ ಇರಬೇಕು. ಕರ್ಮದಿಂದ ಮುಕ್ತಿ ಹೊಂದಬೇಕು. ನಾನು 58ನೇ ವಯಸ್ಸಿಗೆ ಮುಕ್ತಿ ಪಡೆಯಲು ಸಿದ್ಧನಾಗಿದ್ದೇನೆ, ಆದರೆ 14 ವರ್ಷಕ್ಕೆ ಈ ಕಾರ್ಯಕ್ಕೆ ಮುಂದಾಗಿದ್ದರೆ. ಉತ್ತಮವಾಗಿರುತ್ತಿತ್ತು.

ಆದರೆ ಮಾತಾ, ಪಿತೃಗಳ ಅನುಮತಿ ಇರದ ಕಾರಣ ತಡವಾಗಿದೆ ಎಂದರು. ನನ್ನ ಸಂಸಾರ ಕಾರ್ಯಗಳನ್ನು ಪೂರ್ಣಗೊಳಿಸಿ ದೀಕ್ಷೆ ಪಡೆಯಬೇಕಾದರೆ ಹತ್ತು ವರ್ಷಗಳು ಬೇಕಾಗಬಹುದಿತ್ತು ಆದರೆ, ಗುರುಗಳ ಆಶಿರ್ವಾದ, ಅವರ ವಾಣಿಯಿಂದ ಕೇವಲ ಎರಡೇ ವರ್ಷದಲ್ಲಿ ಸಂಸಾರದ ಕಾರ್ಯಗಳು, ಯಾವುದೆ ಅಡೆತಡೆಗಳಿಲ್ಲದೆ. ಆನಂದದಿಂದ ಪೂರ್ಣಗೊಂಡಿವೆ ಎಂದರು.

ಈ ಸಂದರ್ಭದಲ್ಲಿ ಸಮಣೀ ಡಾ.ಸುಯೋಗ ನಿಧಿಜೀ,ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ್ ಶ್ರಾವಕ್ ಸಂಘದ ಅಧ್ಯಕ್ಷ ಶಾಂತಿಲಾಲ ಮೂಥಾ, ಕಾರ್ಯದರ್ಶಿ ನರೇಂದ್ರರಾಜ್ ಮೂಥಾ, ಕಿಶೋರ ಕುಮಾರ, ಪ್ರಸಾರ ರಾಜ್ ಬೋರಾ, ನರೇಂದ್ರ ರಾಜ್ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net