

ರಾಯಚೂರು ಆಚಾರ್ಯ ಭಗವಂತ 1008 ಶ್ರೀ ಶ್ರೀ ಪಾರ್ಶ್ವಚಂದ್ರಜಿ ಮ.ಸಾ. ಅವರಿಂದ ಜೂ.11 ರಂದು ಮುಮುಕ್ಷು ದಿಲೀಪ್ ಕುಮಾರ ಧೋಕಾ ಅವರು ಜೈನ್ ಭಗವತೀ ದೀಕ್ಷೆಯನ್ನು ಸ್ವೀಕರಿಸಲಿದ್ದಾರೆಂದು ಜೈನ್ ಸಮಣೀ ನಿರ್ದೇಶಕ ಡಾ.ಸುಯನಿಧಿಜಿ ಹೇಳಿದರು.
ನಗರದ ಜೈನ್ ಸ್ಥಾನಕ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಾನಿಧ್ಯವನ್ನು ಪ್ರವಚನ ಪ್ರಭಾವಕ ಡಾ.ಶ್ರೀ ಪದಮಚಂದ್ರ ಮಹಾರಾಜ,ಶ್ರೀ ಜಯಧುರಂಧರ ಮುನಿಜೀ, ಶ್ರೀ ಜಯಕಲಶಮುನಿಜೀ ಮತ್ತು ಜಯಪುರಂದರ ಮುನಿಜೀಗಳು,ಜೈನ್ ಸಮಣಿ ಶ್ರೀನಿಧಿ ಜೀ, ಸಮಣಿ ನಿರ್ದೇಶಿಕಾ ಡಾ.ಶ್ರುತನಿಧಿಜೀ ಸಮಣಿ ಡಾ.ಸುಗಮನಿಧಿಜೀ,ಸಮಣಿ ಡಾ.ಸುಧನ್ ನಿಧಿಜೀ ವಹಿಸಲಿದ್ದಾರೆ. ಅಂದು ಧೋಕ ಭವನದಿಂದ ಬೆಳಗ್ಗೆ 8-30 ರಿಂದ ಶೋಭಾಯತ್ರೆ ನಡಲಿದ್ದು, 9-30ಕ್ಕೆ ರೈತ ಭವನದಲ್ಲಿ ದೀಕ್ಷಾ ಬೋಧನೆ ಕಾರ್ಯಕ್ರಮ ನಡೆಲಿದೆ ಎಂದರು.
ದೀಕ್ಷಾ ಬೋಧನೆ ಸ್ವೀಕರಿಸಲಿರುವ ಮುಮುಕ್ಷು ಶ್ರೀ ದಿಲೀಪ್ ಕುಮಾರ ಧೋಕಾ ಮಾತನಾಡಿ, ಸಮಾಜ ಸೇವೆಯನ್ನು ಮಾಡಬಹುದು ಆದರೆ ದೀಕ್ಷೆ ತೆಗೆದುಕೊಂಡರೇ ಮಾತ್ರ ಆತ್ಮ ಕಲ್ಯಾಣ ಮಾಡಬಹುದೆಂದರು. ದೀಕ್ಷೆ ತೆಗೆದುಕೊಳ್ಳುವುದು ಆತ್ಮ ಕಲ್ಯಾಣಕ್ಕಾಗಿ. ಭೂಮಿ ಮೇಲಿರುವ ಎಲ್ಲಾ ಜೀವಿಗಳು ಸುಖ ಬಯಸುತ್ತಾವೆ. ಜೀವನದಲ್ಲಿ ಸುಖಗಿಂತ ದುಖಃವೇ ಜಾಸ್ತಿ ಇರುತ್ತದೆ. ಮನುಷ್ಯ ಹುಟ್ಟಿನಿಂದಲು ಸಾವಿನವರೆಗೂ ದುಖಃ ಅನುಭವಿಸುತ್ತಾರೆ.
ನಾನು ರಾಯಚೂರಿನಲ್ಲಿ ಹುಟ್ಟಬೇಕಾದರೇ ಪುಣ್ಯ ಮಾಡಿರಬೇಕು, ಇಲ್ಲಿ ಎಲ್ಲಾ ಸೌಲಭ್ಯಗಳು ಸಿಗುತ್ತವೆ. ಆದರೆ ಈ ಸೌಲಭ್ಯಗಳು ಬೇರ ಕಡೆ ಸಿಗುವುದಿಲ್ಲ. ಜೈನ್ ಸಿದ್ದಾಂತಗಳು ಕೇಳಲು ಇಲ್ಲ ಅವಕಾಶ ಸಿಗುತ್ತದೆ. ದೀಕ್ಷೆ ಪಡೆಯಲು ಎಲ್ಲರ ತಾಯಿ ತಂದೆ ಸೇರಿದಂತೆ ಎಲ್ಲರ ಅಜ್ಞೆಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಸಮಣೀ ಡಾ.ಸುಯೋಗ ನಿಧಿಜೀ,ಶ್ರೀ ವರ್ಧಮಾನ ಸ್ಥಾನಕವಾಸಿ ಜೈನ್ ಶ್ರಾವಕ್ ಸಂಘದ ಅಧ್ಯಕ್ಷ ಶಾಂತಿಲಾಲ ಮೂಥಾ, ಕಾರ್ಯದರ್ಶಿ ನರೇಂದ್ರರಾಜ್ ಮೂಥಾ, ಕಿಶೋರ ಕುಮಾರ, ಪ್ರಸಾರ ರಾಜ್ ಬೋರಾ, ನರೇಂದ್ರ ರಾಜ್ ಇದ್ದರು.