ಶ್ರದ್ಧಾ ಸಹಕಾರಿ ಕಾರ್ಯ ಶ್ಲಾಘನೀಯ

13npn1
Published on

ನಿಪ್ಪಾಣಿ: ಸಹಕಾರಿ ಸಂಘ ಲಾಭದಲ್ಲಿರುವುದಷ್ಟೇ ಮುಖ್ಯವಲ್ಲ. ಜತೆಗೆ ಸದಸ್ಯರ ಆರ್ಥಿಕ ಅಭಿವೃದ್ಧಿಗೆ ಪೂರಕ ಚಟುವಟಿಕೆ ರೂಪಿಸಬೇಕು. ಆ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಶ್ರದ್ಧಾ ಸಹಕಾರಿ ಕಾರ್ಯ ಶ್ಲಾಘನೀಯ ಎಂದು ನಿಡಸೋಸಿಯ ಸಿದ್ಧ ಸಂಸ್ಥಾನಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.

ಸ್ಥಳೀಯ ವಿಎಸ್‌ಎಂ ಕನ್ವೆನ್ಶನ್ ಹಾಲ್‌ನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಶ್ರದ್ಧಾ ಕ್ರೆಡಿಟ್ ಸೌಹಾರ್ದ ಸಹಕಾರಿಯ ಬೆಳ್ಳಿ ಹಬ್ಬ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶ್ರದ್ಧಾ ಸಹಕಾರಿ ಸಂಘದ ರಜತಮಹೋತ್ಸವ ಸಹಕಾರಿ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದೆ. ಸ್ಥಳೀಯ ಧ್ರುವತಾರೆ ದಿ.ಸೋಮಶೇಖರ ಕೋಠಿವಾಲೆ ಅವರ ಆಶೀರ್ವಾದದಿಂದ ಶ್ರದ್ಧಾ ಸಹಕಾರಿ ಹೊಸ ಛಾಪು ಮೂಡಿಸಿದ್ದು, ಪ್ರಾಮಾಣಿಕ ಹಾಗೂ ಉತ್ತಮ ಸೇವೆಗೆ ಸಾಕ್ಷಿಯಾಗಿದೆ. ಶ್ರದ್ಧಾ ಸಂಸ್ಥೆ ಮತ್ತಷ್ಟು ಪ್ರಗತಿ ಪಥದತ್ತ ಸಾಗಲಿ ಎಂದು ಹಾರೈಸಿದರು.

ರಾಜ್ಯ ಸಹಕಾರ ಮಂಡಳದ ಉಪಾಧ್ಯಕ್ಷ ಜಗದೀಶ ಕವಟಗಿಮಠ ಮಾತನಾಡಿ, ಸಹಕಾರಿ ಸಂಸ್ಥೆಗಳು ಜನಸಾಮಾನ್ಯರ ಸಂಕಷ್ಟಕ್ಕೆ ಮೀಡಿಯುವ ಸೇವಾ ಕೇಂದ್ರಗಳಾಗಿವೆ. ಶ್ರದ್ಧಾ ಸಹಕಾರಿ ಹೆಸರಿಗೆ ತಕ್ಕಂತೆ ಶ್ರದ್ಧೆ ಹಾಗೂ ಪ್ರಾಮಾಣಿಕ ಸೇವೆ ಜೀವಾಳವಾಗಿಸಿಕೊಂಡು ಮಾದರಿ ಸಹಕಾರಿ ಸಂಸ್ಥೆಯಾಗಿದೆ ಎಂದರು.

ಶ್ರದ್ಧಾ ಸಹಕಾರಿ ಸಂಸ್ಥಾಪಕ ಅಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ, ಹಣಕಾಸಿನ ವ್ಯವಹಾರಕ್ಕಷ್ಟೇ ಸೀಮಿತವಾಗದ ಸಂಸ್ಥೆ ಸಮಾಜಮುಖಿ ಕಾರ್ಯಗಳಲ್ಲಿಯೂ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.

ಸಹಕಾರ ಸಂಘದ ಜಂಟಿ ನಿಬಂಧಕ ಡಾ.ಸುರೇಶಗೌಡ, ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ, ಹಣುಮಂತ ಯಲಶೆಟ್ಟಿ ಮಾತನಾಡಿದರು. ನಗರದ ಮುಖ್ಯ ಕಚೇರಿಯಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪೂಜ್ಯರು ಹಾಗೂ ಗಣ್ಯರು ಉದ್ಘಾಟಿಸಿದರು.

ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲಗೊಂಡ ಪಾಟೀಲ, ಉಪಾಧ್ಯಕ್ಷ ಶಿವಮೂರ್ತಿಸ್ವಾಮಿ, ಸಂಚಾಲಕ ಸುರೇಶ ಕೋಠಿವಾಲೆ, ಶಶಿಕಾಂತ ಕೋಠಿವಾಲೆ, ಪಪ್ಪು ಪಾಟೀಲ, ರಾವಸಾಹೇಬ ಪಾಟೀಲ, ಧನಂಜಯ ಮಾನವಿ, ದಯಾನಂದ ಕೋಠಿವಾಲೆ, ರಾಜಶೇಖರ ಹಿರೇಕೊಡಿ, ನರಸಗೊಂಡ ಪಾಟೀಲ, ಶ್ರೀರಾಮ ಭಾರಮಲ, ರಾಜೇಶ ತಿಳವೆ, ಸಂಜಯ ಶಿಂತ್ರೆ, ಗಿರಿಜಾ ಪಾಟೀಲ, ಬೇಬಿತಾಯಿ ಪಾಟೀಲ,

ಮುರಘೇಂದ್ರ ತೋಡಕರ, ಆನಂದ ಜಕಾತಿ, ಶಿವಕುಮಾರ ಚೌಗುಲೆ, ಸಚಿದಾನಂದ ಹಾಲಪ್ಪನವರ, ಗುರು ಪಾಟೀಲ, ಬಸನಗೌಡ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net