ಶ್ರದ್ಧೆ, ಭಕ್ತಿ, ಕಾಯಕ ದೇವರಿಗೆ ಇಷ್ಟ

HYR hanumantha tmpl 28
Published on

ಹಿರಿಯೂರು: ಭಕ್ತಿ, ಶ್ರದ್ಧೆ, ಕಾಯಕ ಸೇರಿ ಸಮಾಜಮುಖಿ ಕಾರ್ಯಗಳು ಕೈಗೊಂಡರೆ ದೇವರ ಕೃಪೆಗೆ ಪಾತ್ರರಾಗಬಹುದು ಎಂದು ಭೋವಿ ಮಠದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಭೂತಯ್ಯನಹಟ್ಟಿ ಗ್ರಾಮದಲ್ಲಿ ಸೋಮವಾರ ಹನುಮಂತ ದೇವಾಲಯ ಲೋಕಾರ್ಪಣೆ ಹಾಗೂ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭಕ್ತನಿಗೆ ಗುಣದೋಷಗಳ ಕುರಿತು ಅರಿವಿರಬೇಕು. ಅಂತಃಕರಣದ ಶುದ್ಧಿ ಬಹುಮುಖ್ಯ. ನಿಜ ಭಕ್ತನು ಭಗವಂತನ ಕೃಪೆಗೆ ಹೇಗೆ ಪಾತ್ರನಾಗುತ್ತಾನೆ ಎಂಬುದಕ್ಕೆ ಭಕ್ತ ಹನುಮಂತ ಒಂದು ಉನ್ನತ ಉದಾಹರಣೆ ಎಂದರು.

ಹನುಮಂತನ ಪ್ರತೀ ಕಣ, ಪ್ರತಿ ಕ್ಷಣ ಶ್ರೀರಾಮನ ನಾಮವೇ ಇತ್ತು. ಎದೆ ಸೀಳಿ ಸೀತಾರಾಮನ ದರ್ಶನ ಮಾಡಿಸುವ ಘಟನೆ ಆಂಜನೇಯನಿಗೆ ರಾಮನ ಮೇಲಿದ್ದ ಭಕ್ತಿಯನ್ನು ಪ್ರತಿಬಿಂಬಿಸುತ್ತದೆ. ಈ ರೀತಿ ನಾವು ನಮ್ಮ ಹಿರಿಯರು-ಗುರುಗಳ ಕುರಿತು ಗೌರವ ಹೊಂದಬೇಕು. ದೇವರಲ್ಲಿ ಹೆಚ್ಚು ಭಕ್ತಿ ಹೊಂದಬೇಕು ಎಂದು ತಿಳಿಸಿದರು.

ದೇವಸ್ಥಾನ ಸೇವಾ ಸಮಿತಿಯ ತಿಮ್ಮಣ್ಣ, ನಾಗರಾಜು, ಹನುಮಂತಪ್ಪ, ಗೌರಮ್ಮ, ತಿಮ್ಮಯ್ಯ, ಚಂದ್ರಪ್ಪ, ಮಮತಾ ಮಂಜುನಾಥ, ಜ್ಯೋತಿ ಈರಣ್ಣ, ಭೀಮಣ್ಣ, ಗುಡಿಹಳ್ಳಿ ನಾಗರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net