ಶ್ರದ್ಧೆ, ಭಕ್ತಿ ಇದ್ದರೆ ದೇವರ ಕೃಪೆ ಸಾಧ್ಯ

4..6
ಮೋಳೆ ಗ್ರಾಮದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಳಸಾರೋಹಣ ಸಂದರ್ಭದಲ್ಲಿ ಗ್ರಾಮಸ್ಥರಿಂದ ಹರಿನಾಮ ಭಜನೆ ಜರುಗಿತು.
Published on

ಐನಾಪುರ: ಶ್ರದ್ಧೆ, ಭಕ್ತಿ ಹಾಗೂ ನಂಬಿಕೆಯಿಂದ ಪೂಜೆ ಸಲ್ಲಿಸಿದಲ್ಲಿ ದೇವರ ಕೃಪೆಗೆ ಪಾತ್ರರಾಗಲು ಸಾಧ್ಯ ಎಂದು ಅಥಣಿ ಶೆಟ್ಟರಮಠದ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಸಮೀಪದ ಮೋಳೆ ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸರಾಹೋಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನ್ಹೋಬ ಮಹಾರಾಜ ದೇವುಕರ ಮಾತನಾಡಿ, ದೇವರ ಅಪ್ಪಣೆ ಇಲ್ಲದೆ ಏನೂ ಆಗದು. ಅಹಂಕಾರ, ದ್ವೇಷ ಬಿಟ್ಟು ಜೀವನ ಸಾಗಿಸಬೇಕು. ಮೋಳೆ ಗ್ರಾಮಸ್ಥರೆಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ವಿಠ್ಠಲ ರುಕ್ಮಿಣಿ ದೇವಸ್ಥಾನ ಅಭಿವೃದ್ಧಿ ಮಾಡಿದ್ದು ಸಂತಸ ಎಂದರು.

ಸಕಲ ವಾದ್ಯಮೇಳ ಹಾಗೂ 108 ಸುಮಂಗಲೆಯರಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕುಂಬಮೇಳ ಮೆರವಣಿಗೆ, ದೇವರಿಗೆ ಕಾಕಡಾರತಿ, ಮರಳಸಿದ್ದ ಸ್ವಾಮೀಜಿ, ಕಾನ್ಹೋಬ ಮಹಾರಾಜ ದೇವುಕರ ಅವರ ಅಮೃತ ಹಸ್ತದಿಂದ ಕಳಸಾರೋಹಣ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿತು. ಸುಭಾಷ ಶೇವಾಳೆ ಮಾಹಾರಾಜರಿಂದ ಕೀರ್ತನೆ ಕಾರ್ಯಕ್ರಮ ಹಾಗೂ ಮಹಾ ಪ್ರಸಾದ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net