ಶ್ರದ್ಧೆ-ಭಕ್ತಿಯಿಂದ ಸಾಧನೆ ಸಾಧ್ಯ

13 Sirwar 1
ಸಿರವಾರದಲ್ಲಿ ನಡೆದ ಅಭಿನಂದನೆ ಸಮಾರಂಭವನ್ನು ಶಾಸಕ ಜಿ.ಹಂಪಯ್ಯ ನಾಯಕ ಉದ್ಘಾಟಿಸಿದರು. ನಿಲೋಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ ಬೃಹನ್ಮಠದ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮೆಥೋಡಿಸ್ಟ್ ಚರ್ಚ್ ಫಾದರ್ ರೆ.ಏಸುರಾಜ್, ಮುಸ್ಲಿಂ ಧರ್ಮಗುರು ಖಾಜಿ ಮಂಜೂರು ಪಾಷ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪಗೌಡ, ಎನ್.ಗಿರಿಜಾಶಂಕರ ಇದ್ದರು.
Published on

ಸಿರವಾರ: ನಿಸ್ವಾರ್ಥವಾಗಿ ಯಾರು ಸೇವೆ ಸಲ್ಲಿಸುತ್ತಾರೆ ಅವರಿಗೆ ಪ್ರಶಸ್ತಿಗಳು ದೊರೆಯುತ್ತಾವೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಪಟ್ಟಣದ ಚುಕ್ಕಿ ಕಲ್ಯಾಣ ಮಂಟಪದಲ್ಲಿ ರಾಯಚೂರು ರಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿ ಎನ್.ವಿಜಯಶಂಕರ ಅವರಿಗೆ ರಾಜ್ಯ ವೈದ್ಯ ರತ್ನ ಪ್ರಶಸ್ತಿ ದೊರೆತ ಕಾರಣ ನಾಗರಿಕ ವೇದಿಕೆಯಿಂದ ಹಮ್ಮಿಕೊಂಡ ಅಭಿನಂದನೆ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.

ಹಳ್ಳಿಯಲ್ಲಿ ಹುಟ್ಟಿ ಶಿಕ್ಷಣ ಪಡೆದು ವೈದ್ಯರಾಗಿ ಗ್ರಾಮೀಣ ಭಾಗದಲ್ಲಿ 14ವರ್ಷ ಸೇವೆ ಸಲ್ಲಿಸಿ, ಜಿಲ್ಲೆ ರಿಮ್ಸ್ ಆಸ್ಪತ್ರೆ ಮುಖ್ಯಸ್ಥರಾಗಿ ಒಳ್ಳೆಯ ಸೇವೆ ಒದಗಿಸಿದ್ದಾರೆ. ಅವರ ನಿಸ್ವಾರ್ಥ ಸೇವೆ ಎಲ್ಲರಿಗೂ ಮಾದರಿ.

ಯಾವುದೇ ಒಂದು ಕೆಲಸದಲ್ಲಿ ಶ್ರದ್ಧೆ, ಭಕ್ತಿ, ನಿಸ್ವಾರ್ಥ ಇದ್ದರೆ ಮಾತ್ರ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ. ಮನುಷ್ಯನಾಗಿ ಹುಟ್ಟಿದ ಮೇಲೆ ಸಾಧನೆ ಮಾಡಬೇಕು. ಡಾ.ವಿಜಯಶಂಕರ ಅವರ ಕುಟುಂಬದಲ್ಲಿ ಒಟ್ಟು 38ವೈದ್ಯರು ಇದ್ದಾರೆ ಎಂದರು.

ನಿಲೋಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ, ನವಲಕಲ್ ಬೃಹನ್ಮಠ ಪೀಠಾಧಿಪತಿ ಅಭಿನವ ಸೋಮನಾಥ ಶಿವಾಚಾರ್ಯ ಸ್ವಾಮೀಜಿ, ಮೆಥೋಡಿಸ್ಟ್ ಚರ್ಚ್ ಫಾದರ್ ರೆ. ಏಸುರಾಜ್, ಮುಸ್ಲಿಂ ಧರ್ಮಗುರು ಖಾಜಿ ಮಂಜೂರು ಪಾಷ್, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್, ಚುಕ್ಕಿ ಸೂಗಪ್ಪ ಸಾಹುಕಾರ್, ಜೆ.ಶರಣಪ್ಪಗೌಡ, ಎನ್.ಗಿರಿಜಾಶಂಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net