ನಿರ್ವಹಣೆ ಇಲ್ಲದೆ ಪಾಳುಬಿದ್ದ ಶೌಚಗೃಹ

11spt9
ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ.ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆ ಬಳಿಯಲ್ಲಿ ನಿರ್ಮಿಸುವ ಶೌಚಗೃಹದ ಬಳಿ ಕಸ ಸಂಗ್ರಹವಾಗಿರುವುದು.
Published on

ಸೋಮವಾರಪೇಟೆ : ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸಿ.ಕೆ.ಸುಬ್ಬಯ್ಯ ರಸ್ತೆಯ ವಾಣಿಜ್ಯ ಮಳಿಗೆಗಳ ಪಕ್ಕದಲ್ಲಿ ನಿರ್ಮಿಸಿರುವ ಶೌಚಗೃಹ ಸೂಕ್ತ ನಿರ್ವಹಣೆಯಿಲ್ಲದೆ ಪಾಳು ಬಿದ್ದಿದೆ. ಅಕ್ಕಪಕ್ಕದ ಕೆಲ ಅಂಗಡಿ, ಮದ್ಯ ಮಾರಾಟಗಾರರು ಕಸವನ್ನು ರಸ್ತೆಯಲ್ಲೇ ಎಸೆಯುತ್ತಿದ್ದಾರೆ. ಪಕ್ಕದ ಚರಂಡಿಯಲ್ಲಿ ಕಸ, ಬಾಟಲಿಗಳು ಸಂಗ್ರಹವಾಗಿದ್ದು ಇಡೀ ವಾತಾವರಣ ಗಬ್ಬೆದ್ದು ನಾರುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಶೌಚಗೃಹ ನಿರ್ಮಿಸಿ ಹಲವಾರು ವರ್ಷಗಳೇ ಕಳೆದಿವೆ. ವಾಣಿಜ್ಯ ಮಳೆಗೆಗಳಲ್ಲೂ ಬಾಡಿಗೆ ಪಡೆದ ವರ್ತಕರಿದ್ದಾರೆ. ಅವರು ಮೂಗು ಮುಚ್ಚಿಕೊಂಡು ವ್ಯಾಪಾರ ನಡೆಸಬೇಕಾಗಿದೆ ಎಂದು ಕೆಲ ವರ್ತಕರು ದೂರಿದ್ದಾರೆ. ಕೂಡಲೇ ಚರಂಡಿ ಮತ್ತು ಶೌಚಗೃಹವನ್ನು ಸ್ವಚ್ಛಗೊಳಿಸಬೇಕೆಂದು ವರ್ತಕರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net