ಮಳೆಗೆ ಶಿಥಿಲಾವಸ್ಥೆ ತಲುಪಿದ ಸರ್ಕಾರಿ ಶಾಲೆ

mkg1a
Published on

ಸಾಸ್ವೆಹಳ್ಳಿ: ಹೋಬಳಿಯ ರಾಂಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಗೊಂಡಿದೆ. ಜತೆಗೆ, ಕಳೆದೊಂದು ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆಗೆ ಕಟ್ಟಡದ ಕೊಠಡಿಗಳು ಸಂಪೂರ್ಣ ಶಿಥಿಲಗೊಂಡು ಯಾವಾಗ ಬೇಕಾದರೂ ಅನಾಹುತ ಸೃಷ್ಟಿಸುವ ಹಂತ ತಲುಪಿವೆ.

ಶಿಕ್ಷಕರು ಇಂತಹ ಕಟ್ಟಡದ ಕೊಠಡಿಯಲ್ಲಿ ಮಕ್ಕಳನ್ನು ಕೂರಿಸಿಕೊಂಡು ಜೀವಭಯದಲ್ಲಿ ಪಾಠ ಮಾಡುವ ಸ್ಥಿತಿ ಏರ್ಪಟ್ಟಿದೆ.

ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಒಟ್ಟು 40 ಮಕ್ಕಳಿದ್ದು, ಶಿಥಿಲಾವಸ್ಥೆಯ 3 ಕೊಠಡಿಗಳಿವೆ. ಒಂದು ಕೊಠಡಿ ನಲಿ-ಕಲಿಗೆ ಎಂದು ಮೀಸಲಿರಿಸಿದ್ದು, ಉಳಿದ 2 ಶಿಥಿಲಾವಸ್ಥೆಯ ಕೊಠಡಿಗಳಲ್ಲಿ 1ರಿಂದ 7ನೇ ತರಗತಿ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ.

ಕಟ್ಟಡ ದುರಸ್ತಿಗೆ ಅನೇಕ ಬಾರಿ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.
ಚಾವಣಿ ಸಹ ಸೋರುತ್ತಿದೆ. ಶಾಲಾ ಆವರಣ ಕೆಸರಿನಿಂದ ಕೂಡಿದೆ. ಗೋಡೆಗಳು ಬಿರುಕು ಬಿಟ್ಟಿದ್ದು, ಅನಾಹುತವಾಗುವ ಮೊದಲು ಗ್ರಾಪಂನವರು ಶಾಲಾ ಮಕ್ಕಳನ್ನು ಹತ್ತಿರದ ಅಂಗನವಾಡಿಗೆ ಸ್ಥಳಾಂತರಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net