ಹದಗೆಟ್ಟ ರಸ್ತೆ ದುರಸ್ತಿಗೆ ಕ್ರಮ

7
ರಾಯಬಾಗ ಹೊರವಲಯದ ರಾಯಬಾಗ-ಅಂಕಲಿ ರಸ್ತೆಯಲ್ಲಿ ಬಿದ್ದಿರುವ ತಗ್ಗು-ಗುಂಡಿಗಳಿಗೆ ಗರಸು ಹಾಕಿ ಮುಚ್ಚಲಾಯಿತು.
Published on

ರಾಯಬಾಗ: ಪಟ್ಟಣದ ಹೊರವಲಯದ ರಾಯಬಾಗ-ಅಂಕಲಿ ಮುಖ್ಯ ರಸ್ತೆಯಲ್ಲಿ ತಗ್ಗು-ಗುಂಡಿಗಳು ಬಿದ್ದಿದ್ದರಿಂದ ಈ ಮಾರ್ಗವಾಗಿ ಓಡಾಡುವ ವಾಹನ ಸವಾರರಿಗೆ ಪ್ರಯಾಣ ಪ್ರಾಯಸವಾಗಿತ್ತು. ಈ ಕುರಿತು ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿಯಲ್ಲಿ ‘ಕೆಟ್ಟ ರಸ್ತೆಯಲ್ಲಿ ಸಂಚಾರ ಅಯೋಮಯ’! ಎಂಬ ಶೀರ್ಷಿಕೆಯಡಿ ಜು.30ರಂದು ವರದಿ ಪ್ರಕಟವಾಗಿತ್ತು.

ವರದಿಗೆ ಎಚ್ಚೆತ್ತುಕೊಂಡ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗುಂಡಿಗಳಿಗೆ ಜಲ್ಲಿಕಲ್ಲು ಹಾಗೂ ಗರಸು ಹಾಕಿ ತಾತ್ಕಾಲಿಕ ಮುಕ್ತಿ ನೀಡಿದ್ದಾರೆ. ಈ ಕಾರ್ಯಕ್ಕೆ ವಾಹನ ಸವಾರರು, ರಸ್ತೆ ಮಾರ್ಗವಾಗಿ ಓಡಾಡುವ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಸ್ತೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮುಗಿದ ಕೂಡಲೇ ರಸ್ತೆ ಮಾಡಿಕೊಡುವುದಾಗಿ ಅಧಿಕಾರಿಗಳು ವಿಜಯವಾಣಿಗೆ ತಿಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net