ಅಯ್ಯೋ ಪಾಠ ಕೇಳಲು ಭಯ...

2myk1
Published on

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ

ಮಾಯಕೊಂಡ ಗ್ರಾಮದಲ್ಲಿ 75 ವರ್ಷಗಳ ಹಿಂದೆ ನಿರ್ವಣವಾದ ಕರ್ನಾಟಕ ಪಬ್ಲಿಕ್ ಶಾಲೆಯ(ಕೆಪಿಎಸ್) ಪ್ರೌಢಶಾಲಾ ವಿಭಾಗದ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ಮೇಲ್ಛಾವಣಿಯ ಸಿಮೆಂಟ್ ಕಳಚಿ ಬೀಳುತ್ತಿದ್ದು, ಪಿಲ್ಲರ್ ಕಂಬಗಳು ಮತ್ತು ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಹಲವು ಕಡೆ ನೆಲದ ಸಿಮೆಂಟ್ ಕಿತ್ತು ಗುಂಡಿ ಬಿದ್ದಿವೆ. ಇದರಿಂದ ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠ ಕೇಳುವ ಸ್ಥಿತಿ ಉಂಟಾಗಿದೆ.

1949 ರಲ್ಲಿ ನಿರ್ವಣಗೊಂಡ ಈ ಕಟ್ಟಡದಲ್ಲಿ ಒಟ್ಟು 13 ಕೊಠಡಿಗಳಿವೆ. ಇಲ್ಲಿ ಪಾಠ ಮಾಡಲು ಸಾಧ್ಯವಾಗದ ಕಾರಣ ಏಳೆಂಟು ವರ್ಷಗಳ ಹಿಂದೆ ನಿರ್ವಿುಸಲಾದ ಆರು ಕೊಠಡಿಗಳಲ್ಲಿ ಪ್ರೌಢಶಾಲಾ ವಿಭಾಗದ 450 ವಿದ್ಯಾರ್ಥಿಗಳಿಗೆ ಪಾಠ ಹೇಳಲಾಗುತ್ತಿದೆ. ಆದರೆ, ಈ ಕೊಠಡಿಗಳು ವಿದ್ಯಾರ್ಥಿಗಳ ಸಂಖ್ಯೆಗೆ ಸಾಕಾಗುತ್ತಿಲ್ಲ ಎಂದು ಕೆಪಿಎಸ್ ಉಪ ಪ್ರಾಚಾರ್ಯ ಟಿ.ಎಸ್. ನಾಗರಾಜ್ ತಿಳಿಸಿದ್ದಾರೆ.

ಪ್ರಾಥಮಿಕ ವಿಭಾಗದಲ್ಲಿ 350 ವಿದ್ಯಾರ್ಥಿಗಳಿದ್ದಾರೆ, ಅದರಲ್ಲಿ 200 ವಿದ್ಯಾರ್ಥಿನಿಯರಿದ್ದಾರೆ. ಪ್ರೌಢಶಾಲೆಯಲ್ಲಿ ಒಟ್ಟು 450 ವಿದ್ಯಾರ್ಥಿಗಳಿದ್ದು, ಅದರಲ್ಲಿ 250 ವಿದ್ಯಾರ್ಥಿನಿಯರಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿನಿಯರಿಗೆ ಮಾತ್ರ ಒಂದೇ ಶೌಚಗೃಹವಿದೆ.

ಹೈಟೆಕ್ ಶೌಚಗೃಹ ನಿರ್ವಿುಸುವಂತೆ ಜೂನ್ ತಿಂಗಳಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಲಾಗಿದೆ. ಇದರ ಜತೆಗೆ, ಶಾಲೆಯ ಆವರಣದಲ್ಲಿ ಸುಸಜ್ಜಿತ ಕಾಂಪೌಂಡ್ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.

ಶಿಥಿಲಗೊಂಡ ಕಟ್ಟಡದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಭಯವಾಗುತ್ತಿದೆ. ಶಾಸಕರು ಗಮನಹರಿಸಿ ನೂತನ ಕಟ್ಟಡ ನಿರ್ವಣಕ್ಕೆ ಕ್ರಮ ಕೈಗೊಳ್ಳಬೇಕು. | ಡಾ.ಸಿ. ಬಸವರಾಜಪ್ಪ, ಪ್ರಾಚಾರ್ಯ, ಕೆಪಿಎಸ್. ಶಾಸಕರು ಈಗಾಗಲೇ ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ವಿುಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. | ಬಿ.ಟಿ. ಹನುಮಂತಪ್ಪ, ಅಧ್ಯಕ್ಷ, ಬ್ಲಾಕ್ ಕಾಂಗ್ರೆಸ್ ಸಮಿತಿ.

ವಿದ್ಯಾರ್ಥಿಗಳಿಗೆ ಹೈಟೆಕ್ ಶೌಚಗೃಹ ನಿರ್ವಿುಸುವಂತೆ ಪ್ರಾಚಾರ್ಯರು ಹಾಗೂ ಪಾಲಕ ಸಮಿತಿಯ ಮನವಿ ಬಂದಿದೆ. ನರೇಗಾ ಯೋಜನೆಯಡಿ ನಿರ್ವಿುಸಲು ಸಾಮಾನ್ಯ ಸಭೆಯಲ್ಲಿ ರ್ಚಚಿಸಿ ಕ್ರಮ ಕೈಗೊಳ್ಳಲಾಗುವುದು. | ಎನ್. ಶ್ರೀನಿವಾಸ್, ಪಿಡಿಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net