ಹದಗೆಟ್ಟ ಕಲಘಟಗಿ-ಹಳಿಯಾಳ ರಸ್ತೆ

4-KLG-1
Published on

ಕಲಘಟಗಿ: ವರ್ಷ ಆಯ್ತು, ಯಾವಾಗ ಮುಗಿತೈತ್ರೀ ಈ ರಸ್ತೆ ಕಾಮಗಾರಿ...ಮೊದಲಿದ್ದ ರಸ್ತೇನ, ಚಲೋ ಇತ್ತು..

ಇದು ಪಟ್ಟಣದಿಂದ ಹಳಿಯಾಳ ಮಾರ್ಗದ ಸುಮಾರು 12 ಕಿಮೀ ರಸ್ತೆ ದುರಸ್ತಿ ಕಾರ್ಯದ ಬಗ್ಗೆ ಜನರಾಡುವ ಮಾತು. ಕಾಮಗಾರಿ ನಿಗದಿತ ವೇಳೆಗೆ ಮುಗಿಯದೆ ಅಪೂರ್ಣ ಸ್ಥಿತಿಯಲ್ಲಿದೆ. ಹದಗೆಟ್ಟಿರುವ ರಸ್ತೆಯಿಂದಾಗಿ ಪಟ್ಟಣ ಮತ್ತು ಹಳಿಯಾಳಕ್ಕೆ ಬರುಹೋಗುವ ವಾಹನ ಚಾಲಕರು, ಸವಾರರು ರೋಸಿ ಹೋಗಿದ್ದಾರೆ. ಲೋಕೋಪಯೋಗಿ ಇಲಾಖೆ ಸುಮಾರು 12 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ. ಮೊದಲಿದ್ದ ರಸ್ತೆಯನ್ನು ಜೆಸಿಬಿ ಮೂಲಕ ಅಗೆಯಲಾಗಿದೆ. ಈ ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಬ್ಬರು ಕಾಮಗಾರಿ ಕೈಗೊಂಡಿರುವ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ಇತ್ತೀಚೆಗಷ್ಟೇ ಜರುಗಿದ ತಾಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಶಾಸಕ ಸಿ.ಎಂ. ನಿಂಬಣ್ಣವರ ಸಹ ಈ ರಸ್ತೆ ಕಾಮಗಾರಿಗಳನ್ನು ನಿಗದಿತ ವೇಳೆಗೆ ಏಕೆ ಮುಗಿಸುತ್ತಿಲ್ಲ ಎಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರನ್ನು ತರಾಟೆಗೆ ತೆಗೆದು ಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಈ ರಸ್ತೆಯಲ್ಲಿ ತಗ್ಗುಗುಂಡಿ ಅಧಿಕವಾಗಿರುವುದರಿಂದ ಮೇಲಿಂದ ಮೇಲೆ ಲಾರಿಗಳು, ದ್ವಿಚಕ್ರವಾಹನಗಳು ಅಪಘಾತಕ್ಕೀಡಾಗುತ್ತಿವೆ. ಧೂಳಿನಿಂದಾಗಿ ಅನಾರೋಗ್ಯದಿಂದ ಬಳಲುವಂತಾಗಿದೆ. | ಯಲ್ಲಾರಿ ಶಿಂಧೆ ತಾಪಂ ನಾಮನಿರ್ದೇಶಿತ ಸದಸ್ಯ, ಸಂಗಮೇಶ್ವರ ಗ್ರಾಮ| ಪರಶುರಾಮ ಎತ್ತಿನಗುಡ್ಡ

ಸೂಳಿಕಟ್ಟಿ ಗ್ರಾಮದ ರೈತ

ಕಲಘಟಗಿ-ಹಳಿಯಾಳ ಮಾರ್ಗದ ರಸ್ತೆ ಕಾಮಗಾರಿ ಆರಂಭಗೊಂಡು ಒಂದೂವರೆ ವರ್ಷ ಕಳೆದಿದೆ. ನಿಗದಿತ ವೇಳೆಗೆ ಕೆಲಸ ಮುಗಿಸಿಲ್ಲ. ಗುತ್ತಿಗೆದಾರ ಎನ್.ಬಿ. ಹಿರೇಮಠ ಅವರಿಗೆ ನೋಟಿಸ್ ನೀಡಿದ್ದೇವೆ. ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುತ್ತೇವೆ. | ಎಂ. ರಾಮರಾವ್ ಸಹಾಯಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ ಉಪವಿಭಾಗ, ಕಲಘಟಗಿ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net