

ಹೆಬ್ರಿ: ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾನಾಡಿ ಸಂಪರ್ಕಿಸುವ ಸೇತುವೆ ಸಂಪೂರ್ಣ ಶಿಥಿಲಗೊಂಡಿರುವುದರಿಂದ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಕಾಂಗ್ರೆಸ್ ನಾಯಕ ಉದಯಕುಮಾರ್ ಶೆಟ್ಟಿ ಕೋರಿಕೆಯಂತೆ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಾಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಚ್ಚೂರು ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಮಾತನಾಡಿ, ಸೇತುವೆ ಶಿಥಿಲಗೊಂಡು ಸಮಸ್ಯೆಯಾಗಿದೆ. ಆಟೋ, ಕಾರು, ದ್ವಿಚಕ್ರ ವಾಹನಗಳು ಮಾತ್ರ ಓಡಾಡಬಹುದು. ಇಲ್ಲಿ ಸೇತುವೆ ಸಹಿತ ಕಿಂಡಿ ಅಣೆಕಟ್ಟೆಯ ನಿರ್ಮಾಣವಾಗಬೇಕು. ಸೇತುವೆ ಎರಡು ಭಾಗದ ಹ್ಯಾಂಡ್ ರೈಲಿಂಗ್ಸ್‌ಗಳು ಇಲ್ಲದಿರುವುದರಿಂದ ವಿದ್ಯಾರ್ಥಿಗಳು ಸೇತುವೆ ದಾಟುವಾಗ ಭಯದಲ್ಲೇ ಸಂಚರಿಸುವಂತಾಗಿದೆ. ಶೀಘ್ರದಲ್ಲೇ ಹ್ಯಾಂಡ್ ರೈಲಿಂಗ್ಸ್‌ಗಳನ್ನು ದುರಸ್ತಿ ಮಾಡಬೇಕು ಎಂದರು. ಅತಿ ಬೇಡಿಕೆ ಇರುವ ಸೇತುವೆ ಇದಾಗಿದೆ. ನಮ್ಮ ಬೇಡಿಕೆಗಳು ಸಕಾಲದಲ್ಲಿ ಈಡೇರಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಚುನಾವಣೆ ಬಹಿಷ್ಕರಿಸುವುದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ. ಕುಚ್ಚೂರು ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬಾದ್ಲು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ, ಪ್ರಮುಖರಾದ ಶ್ರೀಶ ಶೆಟ್ಟಿ, ರೋಷನ್ ಕುಮಾರ್ ಶೆಟ್ಟಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ತಾತ್ಕಾಲಿಕವಾಗಿ ಜನರು ಹ್ಯಾಂಡ್ ರೈಲಿಂಗ್ ದುರಸ್ತಿ ಪಡಿಸಲು ಆಗ್ರಹಿಸಿದ್ದಾರೆ. ಇದನ್ನು ಶೀಘ್ರದಲ್ಲಿ ಮಾಡುತ್ತೇವೆ. ಮರದ ಹಲಗೆಗಳನ್ನು ಕಿಂಡಿ ಅಣೆಕಟ್ಟಿಗೆ ಉಪಯೋಗಿಸುತ್ತಿದ್ದು, ಬೇಡಿಕೆಯಂತೆ ಮೇಲಧಿಕಾರಿಗಳಕ ಗಮನಕ್ಕೆ ತಂದು ಫೈಬರ್ ಗೇಟ್ ಅಳವಡಿಸಲಾಗುವುದು. ಸೇತುವೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮೇಲಧಿಕಾರಿಗೆ ಪತ್ರ ಬರೆಯುತ್ತೇವೆ. - ರಾಜೇಶ್ ಭಂಡಾರಿ, ಎಇಇ, ಸಣ್ಣ ನೀರಾವರಿ ಇಲಾಖೆ ಉಡುಪಿ https://www.vijayavani.net/short-bridge-invites-danger https://www.vijayavani.net/potholes-along-konki-road