ಅಪಾಯ ಆಹ್ವಾನಿಸುತ್ತಿರುವ ಶಿಥಿಲ ವಿದ್ಯುತ್ ಕಂಬ

19ark2
ಅರಕಲಗೂಡು ತಾಲೂಕಿನ ಕೊಣನೂರು ಕುಂಚಿಟಿಗರ ಬೀದಿಯ ಬಸವೇಶ್ವರ ವೃತ್ತದ ಬಳಿ ಶಿಥಿಲಗೊಂಡಿರುವ ವಿದ್ಯುತ್ ಕಂಬ ಅರ್ಧಕ್ಕೆ ತುಂಡಾಗಿ ಮುರಿದು ಬೀಳುವ ಸ್ಥಿತಿಯಲ್ಲಿದೆ.
Published on

ಅರಕಲಗೂಡು: ತಾಲೂಕಿನ ಕೊಣನೂರು ಕುಂಚಿಟಿಗರ ಬೀದಿಯ ಬಸವೇಶ್ವರ ವೃತ್ತದ ಬಳಿ ವಿದ್ಯುತ್ ಕಂಬ ಶಿಥಿಲಗೊಂಡು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ಅರಕಲಗೂಡು-ಕೊಣನೂರು ಮಾರ್ಗದ ರಸ್ತೆ ಬದಿಯ ವಿದ್ಯುತ್ ಕಂಬ ಶಿಥಿಲಗೊಂಡು ಹಲವು ದಿನಗಳು ಕಳೆದರೂ ಸೆಸ್ಕ್ ಸಿಬ್ಬಂದಿ ಬದಲಾಯಿಸುವ ಗೋಜಿಗೆ ಹೋಗಿಲ್ಲ. ಪರಿಣಾಮವಾಗಿ ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿ ವಿದ್ಯುತ್ ಕಂಬ ಅನಾಹುತಕ್ಕೆ ಎದುರು ನೋಡುತ್ತಿದೆ.

ಈ ರಸ್ತೆಯಲ್ಲಿ ನಿತ್ಯ ಪಾದಚಾರಿಗಳು ಹಾಗೂ ಅಪಾರ ವಾಹನಗಳು ಓಡಾಡುತ್ತವೆ. ವಿದ್ಯುತ್ ಕಂಬದ ಅಕ್ಕಪಕ್ಕದಲ್ಲಿ ವಾಸ ಮನೆಗಳಿಗೆ ಕಂಬ ಮುರಿದು ಬಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಕೂಡಲೇ ಸೆಸ್ಕ್ ಸಿಬ್ಬಂದಿ ಕಂಬ ತೆರವುಗೊಳಿಸಿ ಮುಂದಾಗುವ ಅನಾಹುತ ತಪ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಯಾರೋ ವಾಹನ ಸವಾರರು ಕಂಬಕ್ಕೆ ಗುದ್ದಿಸಿದ ಪರಿಣಾಮ ಶಿಥಿಲಗೊಂಡಿದೆ. ಶೀಘ್ರದಲ್ಲೇ ವಿದ್ಯುತ್ ಕಂಬ ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕೊಣನೂರು ಸೆಸ್ಕ್ ಸಹಾಯಕ ಇಂಜಿನಿಯರ್ ಯೋಗೇಶ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net