

ಭಟ್ಕಳ: ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿಗ್ವಿಜಯ ಮಹೋತ್ಸವವು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ಸಮಾಜ ಬಾಧವರ ಹರ್ಷೆದ್ಘಾರಗಳ ನಡುವೆ ವೈಭವಯುತವಾಗಿ ಭಾನುವಾರ ನೇರವೇರಿತು.
45 ವರ್ಷದ ಬಳಿಕ ಶ್ರೀಗಳು ಚಾತುರ್ವಸ್ಯ ವ್ರತವನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ಶ್ರೀ ದ್ವಾರಕನಾಥ ಭವನದಲ್ಲಿ ಆರಂಭಿಸಿದ್ದರು.
ಸೆ. 18ರಂದು ಶ್ರೀಗಳು ತಮ್ಮ ಚಾತುರ್ವಸ್ಯ ವ್ರತವನ್ನು ಮೃತ್ತಿಕೆ ವಿಸರ್ಜನೆಯ ಮುಖೇನ ಸಂಪನ್ನಗೊಳಿಸಿದರು. ಗೋವಾದ ಶ್ರೀ ಪರ್ತಗಾಳಿ ಜೀವೋತ್ತಮ ಮಠದಲ್ಲಿ 2025ರ ನವೆಂಬರ್ನಲ್ಲಿ ಆಯೋಜನೆಗೊಂಡಿರುವ ಮಠದ 550 ವರ್ಷದ ಮಹೋತ್ಸವದಲ್ಲಿ ಸ್ಥಾಪಿಸಲಿರುವ 77 ಅಡಿ ಎತ್ತರದ ಬೃಹತ್ ಶ್ರೀ ರಾಮಚಂದ್ರ ದೇವರ ಕಂಚಿನ ಪ್ರತಿಮೆಯ ಪ್ರತಿ ಕೃತಿಯನ್ನು ಪರಮಪೂಜ್ಯ ಸ್ವಾಮೀಜಿಯವರು ಸೆ. 28ರಂದು ಅನಾವರಣಗೊಳಿಸಿದರು.
ಸೆ. 29ರಂದು ಬೆಳಗ್ಗೆ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ದ್ವಾರಕನಾಥ ಭವನದಿಂದ ಆರಂಭವಾದ ದಿಗ್ವಿಜಯ ಮಹೋತ್ಸವವು ನ್ಯಾಷನಲ್ ಕಾಲೇಜ್ ಸಿಗ್ನಲ್, ಗಾಂಧಿ ಬಜಾರ್ ರೋಡ್ ಮೂಲಕ ಪುನಹ ದ್ವಾರಕನಾಥ ಭವನಕ್ಕೆ ಬಂದು ತಲುಪಿತು. ಕರಾವಳಿಯ ಹುಲಿಯ ವೇಷ, ಚೆಂಡೆ ವಾದನ, ಕರ್ನಾಟಕ ಮತ್ತು ಕೇರಳದ ಜನಪದ ವೇಷಗಳು ಈ ದಿಗ್ವಿಜಯ ಮಹೋತ್ಸವದ ಚಂದವನ್ನು ಇನ್ನಷ್ಟು ಹೆಚ್ಚಿಸಿತ್ತು.
ಶ್ರೀ ಮಠದ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಬೆಂಗಳೂರು ಚಾತುರ್ವಸ್ಯ ಕಮಿಟಿಯ ಗೌರವಾಧ್ಯಕ್ಷ ದಯಾನಂದ ಪೈ, ಅಧ್ಯಕ್ಷ ಅಮರನಾಥ ಕಾಮತ್, ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ ಕಾಮತ್, ಬೆಂಗಳೂರು ಚಾತುರ್ವಸ್ಯ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಕಾಮತ್, ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯಹಾಗೂ ಗೋವಾ, ಮಹಾರಾಷ್ಟ›, ಕೇರಳ ಮತ್ತು ಕರ್ನಾಟಕದ ಸಹಸ್ರಾರು ಸಮಾಜ ಬಾಂಧವರು ದಿಗ್ವಿಜಯ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು.