ಭೂ ದಾಖಲೆಗಳ ಡಿಜಿಟಲೀಕರಣ

ನೆಲಮಂಗಲ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಭಿಲೇಖಾಲಯ ಶಾಖೆ ಉದ್ಘಾಟನೆ ಹಾಗೂ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು. ತಹಸೀಲ್ದಾರ್ ಅಮೃತ್‌ಆತ್ರೇಶ್,ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ನಗರಸಭೆ ಸದಸ್ಯ ಎನ್.ಗಣೇಶ್, ಸಿ.ಪ್ರದೀಪ್, ಪುರುಷೋತ್ತಮ್ ಸೇರಿ ಮತ್ತಿತರರು ಇದ್ದರು.
ನೆಲಮಂಗಲ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಅಭಿಲೇಖಾಲಯ ಶಾಖೆ ಉದ್ಘಾಟನೆ ಹಾಗೂ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಶಾಸಕ ಎನ್.ಶ್ರೀನಿವಾಸ್ ಚಾಲನೆ ನೀಡಿದರು. ತಹಸೀಲ್ದಾರ್ ಅಮೃತ್‌ಆತ್ರೇಶ್,ಎನ್‌ಪಿಎ ಅಧ್ಯಕ್ಷ ನಾರಾಯಣಗೌಡ, ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್, ನಗರಸಭೆ ಸದಸ್ಯ ಎನ್.ಗಣೇಶ್, ಸಿ.ಪ್ರದೀಪ್, ಪುರುಷೋತ್ತಮ್ ಸೇರಿ ಮತ್ತಿತರರು ಇದ್ದರು.
Published on

       ತಪ್ಪಲಿದೆ ರೆಕಾರ್ಡ್ ರೂಮ್‌ಗೆ ಅಲೆದಾಟ-ಯೋಜನೆಗೆ ಶಾಸಕ ಶ್ರೀನಿವಾಸ್ ಚಾಲನೆ

ನೆಲಮಂಗಲ: ರೈತರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಜಾರಿಗೆ ತಂದಿರುವ ಹಳೆಯ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮ ಉತ್ತಮ ಯೋಜನೆಯಾಗಿದೆ ಎಂದು ಶಾಸಕ ಎನ್.ಶ್ರೀನಿವಾಸ್ ತಿಳಿಸಿದರು. ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಭಾನುವಾರ ಅಭಿಲೇಖಾಲಯ ಶಾಖೆ ಉದ್ಘಾಟನೆ ಹಾಗೂ ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ತಾಲೂಕು ಕಚೇರಿಯಲ್ಲಿ ಭೂ ದಾಖಲೆಗಳು ಹಳೆಯದಾಗಿದ್ದು, ದುಸ್ಥಿತಿಯಲ್ಲಿವೆ. ಇದರಿಂದ ರೈತರು ರೆಕಾರ್ಡ್ ರೂಮ್‌ನಿಂದ ದಾಖಲೆಗಳನ್ನು ಪಡೆಯಲು ತಿಂಗಳುಗಟ್ಟಲೇ ಕಚೇರಿಗೆ ಅಲೆಯುವಂತಾಗಿದ್ದು, ತೊಂದರೆ ಅನುಭವಿಸುತ್ತಿದ್ದರು. ಹಾಗಾಗಿ ಸರ್ಕಾರ ಇದಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾಗೂ ದಾಖಲೆಯನ್ನು ಸಂರಕ್ಷಣೆ ಜತೆಗೆ ಈವರೆಗೂ ಇದ್ದ ಭೂ ದಾಖಲೆಗಳನ್ನು ನೀಡುವಲ್ಲಿ ವಿಳಂಬ, ಸಮಸ್ಯೆಗಳನ್ನು ಪರಿಹರಿಸಲು ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ರೈತರಿಗೆ ಅನುಕೂಲವಾಗಲಿದೆ ಎಂದರು. ಅಲ್ಲದೆ ತ್ವರಿತ ಆಡಳಿತ ಸೇವೆ ಒದಗಿಸುವ ಪ್ರಯತ್ನ ಇದಾಗಿದೆ. ಈ ಯೋಜನೆಯಿಂದ ದುಸ್ಥಿತಿಯಲ್ಲಿರುವ ಹಳೆಯ ಭೂ ದಾಖಲೆಗಳು ಡಿಜಿಟಲ್ ದಾಖಲೆಯಾಗಿ ಪರಿವರ್ತನೆಯಾಗಲಿದೆ. ಇದರಿಂದ ರೈತರೇ ನೇರವಾಗಿ ಡಿಜಿಟಲ್ ಮಾಧ್ಯಮದಿಂದ ಭೂ ದಾಖಲೆಗಳನ್ನು ಪಡೆಯಬಹುದಾಗಿದ್ದು, ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ಈ ಯೋಜನೆ ರೈತರಿಗೆ ವರದಾನವಾಗಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಮುತುವರ್ಜಿ ವಹಿಸಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸುವುದರ ಮೂಲಕ ಯಾವುದೇ ಸಮಸ್ಯೆಯಾಗದಂತೆ ತಾಲೂಕಿನಲ್ಲಿನ ಎಲ್ಲ ಹಳೆಯ ಭೂ ದಾಖಲೆಗಳನ್ನು ಡಿಜಿಟಲ್ ದಾಖಲೆಯಾಗಿ ಪರಿವರ್ತಿಸಬೇಕು. ಈ ಮೂಲಕ ರೈತರಿಗೆ ಅನುಕೂಲ ಕಲ್ಪಿಸಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ನಾಗರಾಜು, ಉಪಾದ್ಯಕ್ಷ ಸಿ.ಎಂ.ಗೌಡ, ಒಕ್ಕಲಿಗ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಕೆ ನಾಗರಾಜು, ಉಪತಹಸೀಲ್ದಾರ್ ಭಾಗ್ಯ, ಶಿರಸ್ತೇದಾರ್ ರವೀಂದ್ರ, ಕೇಸ್‌ವರ್ಕರ್ ಹರ್ಷವರ್ಧನ್, ಗ್ರಾಮ ಆಡಳಿತಾಧಿಕಾರಿ ಮಾರುತಿ, ಮುಖಂಡ ಬೂದಿಹಾಲ್‌ಮಧುಕುಮಾರ್, ಸುರೇಶ್, ಹನುಮಂತರಾಯಪ್ಪ ಮತ್ತಿತರರು ಉಪಸ್ಥಿತರಿದ್ದರು. ಭೂ ಸುರಕ್ಷಾ ಮತ್ತು ಭೂ ದಾಖಲೆಗಳ ಡಿಜಿಟಲೀಕರಣದಿಂದ ನೇರವಾಗಿ ದಾಖಲೆಗಳು ಲಭ್ಯವಾಗಲಿದ್ದು, ಜನರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಎಲ್ಲವೂ ಸುಲಭವಾಗಿ ಅವರ ಕೈಗೆ ಸಿಗಲಿವೆ. ಭವಿಷ್ಯದಲ್ಲೂ ತೊಂದರೆ ಎದುರಾಗುವುದಿಲ್ಲ. ಜನರು ಸರ್ಕಾರಿ ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ. ಇದೊಂದು ಪರಿಣಾಮಕಾರಿ ಯೋಜನೆಯಾಗಿದೆ. -ಎನ್. ಶ್ರೀನಿವಾಸ್ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net