ಡಿಜಟಲೀಕರಣದಿಂದ ಛಾಯಾಗ್ರಹಣದ ಸೂಷ್ಮತೆ ಕ್ಷೀಣ: ಹಿರಿಯ ಛಾಯಾಗ್ರಾಹಕ ಬಿ.ಎಸ್.ರಾಜಾರಾಂ

6
Published on

ಮೈಸೂರು: ಇಂದಿನ ಡಿಜಿಟಲೀಕಣದಿಂದಾಗಿ ಛಾಯಾಗ್ರಹಣದ ಸೂಕ್ಷ್ಮತೆ ಮತ್ತು ಅದರ ನಿಖರತೆ ಕಡಿಮೆಯಾಗುತ್ತಿದೆ ಎಂದು ಹಿರಿಂು ಛಾಂಾಗ್ರಾಹಕ ಬಿ.ಎಸ್.ರಾಜಾರಾಂ ವಿಷಾದಿಸಿದರು.

ಮೈಸೂರು ಆರ್ಟ್ ಗ್ಯಾಲರಿಯಿಂದ ರಾಮಾನುಜ ರಸ್ತೆಯಲ್ಲಿರುವ ಗ್ಯಾಲರಿ ಸಭಾಂಗಣದಲ್ಲಿ ಭಾನುವಾರ ಆಂೋಜಿಸಿದ್ದ ಸಾಧಕರೊಂದಿಗೆ ಸಂವಾದ-103 ಕಾರ್ಯಕ್ರಮದಲ್ಲಿ ರಂಗನಾಥ್ ಮೈಸೂರು ಅವರ ಸನ್ಮಾನ, ‘ವ್ಯಕ್ತಿ-ಅಭಿವ್ಯಕ್ತಿ’ ಛಾಂಾಚಿತ್ರ ಪ್ರದರ್ಶನ ಕಾಂರ್ುಕ್ರಮ ಅವರು ಉದ್ಘಾಟಿಸಿ ವಾತನಾಡಿದರು.

ಕೃತಕ ಬುದ್ಧಿಮತ್ತೆಯ ಈ ಕಾಲಘಟ್ಟದಲ್ಲಿ ಛಾಯಾಚಿತ್ರಗಳನ್ನು ಗಮನಿಸಿದರೆ ಯಾವುದು ನೈಜವಾದದ್ದು, ಯಾವುದು ಕೃತಕವಾದದ್ದು ಎಂಬ ವ್ಯತ್ಯಾಸಗಳು ಗೋಜಲಾಗುತ್ತಿವೆ. ಹಿಂದೆ ಛಾಯಾಗ್ರಹಣ ಒಂದು ಸವಾಲಿನ ಹಾಗೂ ಅತ್ಯಂತ ಸೂಕ್ಷ್ಮತೆಯ ಕೆಲಸವಾಗಿತ್ತು. ಒಂದೊಂದು ಛಾಯಾಚಿತ್ರ ತೆಗೆಯಲು ಸಾಕಷ್ಟು ತಯಾರಿ, ಶ್ರದ್ಧೆ ಹೆಚ್ಚು ವ್ಯಯವಾಗುತ್ತಿತ್ತು ಎಂದರು.

ಆದರೆ ಇವತ್ತಿನ ಡಿಜಿಟಲೀಕರಣದಿಂದಾಗಿ ಕಾಂಪ್ಯಾಕ್ಟ್ ಕ್ಯಾಮೆರಾಗಳು, ಮೊಬೈಲ್ ಕ್ಯಾಮರಾಗಳು ಹೆಚ್ಚಾಗಿ ಛಾಯಾಚಿತ್ರಗ್ರಹಣದ ಸೂಕ್ಷ್ಮತೆ ಮತ್ತು ಅದರ ನಿಖರತೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.

ರಂಗನಾಥ್ ಅವರ ಛಾಯಾಗ್ರಹಣ ಭವ್ಯವಾದವು. ಒಬ್ಬ ಛಾಯಾಗ್ರಾಹಕ ಅಥವಾ ಕಲಾವಿದ ನಿರಂತರವಾಗಿ ಸಾಧನೆಯ ಪಥದಲ್ಲಿ ಸಾಗಿದರೆ ಅವರದೇ ಆದ ದಾರಿ ಕೊಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಛಾಯಾಗ್ರಹಣ ಎಂಬ ಕಲೆ ಒಂದು ಹುಚ್ಚುತನ ಹಾಗೂ ದುಬಾರಿಯ ಕೆಲಸ. ಇವತ್ತಿನ ಛಾಯಾಗ್ರಹಣ ಆ ಅಂಶವನ್ನು ಕಳಕೊಂಡಿವೆ. ಇಂದು ಸಮರ್ಥ ಬಳಕೆಗಿಂತ, ವ್ಯತಿಕರಿಕ್ತವಾದ ಬಳಕೆಯಾಗಿ ಅದರ ದೂರದೃಷ್ಟಿಯನ್ನು ಕಳೆದುಕೊಳ್ಳುತ್ತಿದೆ ಎಂದರು. ಕವಯಿತ್ರಿ ಡಾ.ಲತಾ ರಾಜಶೇಖರ್ ಮಾತನಾಡಿದರು. ಛಾಂಾಚಿತ್ರ ಗ್ರಾಹಕ ರಂಗನಾಥ್ ಮೈಸೂರು ಅವರನ್ನು ಸನ್ಮಾನಿಸಲಾಯಿತು.

ಮೈಸೂರು ಆರ್ಟ್ ಗ್ಯಾಲರಿ ಅಧ್ಯಕ್ಷ ಎಲ್.ಶಿವಲಿಂಗಪ್ಪ, ಹಿರಿಂು ವಿಜ್ಞಾನ ಲೇಖಕರಾದ ಛಾಂಾಗ್ರಾಹಕ ಎಸ್.ರಾಮಪ್ರಸಾದ್, ವೈದ್ಯ ಡಾ.ಎಚ್.ವಿ. ರಾಜಶೇಖರ, ಹಿರಿಂು ಛಾಂಾಗ್ರಾಹಕ ಕೊ.ಸು ನರಸಿಂಹಮೂರ್ತಿ, ಮೈಸೂರು ಸಾಹಿತ್ಯ ದಾಸೋಹ ಸಂಸ್ಥಾಪಕಿ ಪದ್ಮ ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net