ಉಮ್ಮಡಹಳ್ಳಿಯಲ್ಲಿ ಡಿಜಿಟಲ್ ಸಾಕ್ಷರತಾ ಜಾಗೃತಿ: ಗ್ರಂಥಾಲಯ, ಶಿಕ್ಷಣ ಫೌಂಡೇಷನ್‌ನಿಂದ ಆಯೋಜನೆ

Digital literacy awareness in Ummadahalli mandya
Published on

ಮಂಡ್ಯ: ತಾಲೂಕಿನ ಉಮ್ಮಡಹಳ್ಳಿ ಗ್ರಾಮದಲ್ಲಿ ಶಿಕ್ಷಣ ಫೌಂಡೇಷನ್, ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ಸಹಯೋಗದಲ್ಲಿ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಗ್ರಾಮದ ಜನರು ಸಂಪೂರ್ಣ ತಂತ್ರಜ್ಞಾನದ ಸಾಕ್ಷರತೆ ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದ 16 ರಿಂದ 60 ವರ್ಷದೊಳಗಿನವರಿಗೆ ಬೇಸ್ ಲೈನ್ ಸರ್ವೆ ಮಾಡುವುದು. ಮಾತ್ರವಲ್ಲದೆ ಅವರಿಗೆ ಸ್ಮಾರ್ಟ್ ಫೋನ್, ಡಿಜಿಟಲ್ ಡಿವೈಸ್, ಇಂಟರ್ನೆಟ್ ಹಾಗೂ ನಾಗರಿಕರಿಗೆ ಬೇಕಾದ ಪ್ರಾಥಮಿಕ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಕಾರ್ಯಕ್ರಮ ಮಾಡುತ್ತಿರುವ ಬಗ್ಗೆ ಜಾಥಾದ ಮೂಲಕ ಅರಿವು ಮೂಡಿಸಲಾಯಿತು.

ಗ್ರಾಪಂ ಅಧ್ಯಕ್ಷ ಶ್ರೀಕಾಂತ್, ಪಿಡಿಒ ಮಂಜುನಾಥ್, ಕಾರ್ಯದರ್ಶಿ ಮಧುಸೂದನ್, ಪ್ರೌಢಶಾಲಾ ಮುಖ್ಯಶಿಕ್ಷಕ ನಾಗರಾಜು, ಗ್ರಂಥಪಾಲಕ ಯೋಗೇಶ್, ಗ್ರಾಮ ಡಿಜಿ ವಿಕಸನ ಜಿಲ್ಲಾ ಸಂಯೋಜಕರಾದ ಪುಟ್ಟಮಾದಯ್ಯ, ರಾಜೇಶ್, ಕುಮಾರಸ್ವಾಮಿ, ತಾಲೂಕು ಸಂಯೋಜಕಿ ಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net