

ಹೆಬ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಕೇಂದ್ರ ಸರ್ಕಾರದ ಮಹತ್ತರ ಯೋಜನೆ ಸಿ.ಎಸ್.ಸಿ ಅಡಿಯಲ್ಲಿ ಬರುವ ಸೇವೆಗಳನ್ನು ಫಲಾನುಭವಿಗಳಿಗೆ ತಲುಪಿಸುವ ಡಿಜಿ ಪೇ ಯೋಜನೆಗೆ ಚಾರ ವಲಯದ ಸಿ.ಎಸ್.ಸಿ ಕೆಂದ್ರದಲ್ಲಿ ಉಡುಪಿ ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ಚಾಲನೆ ನೀಡಿದರು.
ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ನೀರೇ ಕೃಷ್ಣ ಶೆಟ್ಟಿ ಮಾತನಾಡಿ, ಸಾಮಾನ್ಯ ಸೇವಾಕೇಂದ್ರ ಕಾರ್ಯಕ್ರಮದ ಬಹುದೊಡ್ಡ ಬ್ಯಾಂಕಿಂಗ್ ಸೇವಾ ಸೌಲಭ್ಯವಾಗಿದೆ. ಡಿಜಿ ಪೇ ಮೂಲಕ ಗ್ರಾಮಸ್ಥರು ಹಳ್ಳಿಯಲ್ಲಿ ಇರುವ ಸಿಎಸ್ಸಿ ಡಿಜಿಟಲ್ ಸೇವಾ ಕೇಂದ್ರದಲ್ಲಿ ಖಾತೆಯ ಹಣವನ್ನು ಜಮಾ ಮಾಡಲು, ವರ್ಗಾವಣೆ, ಪರಿಶೀಲನೆ ಮಾಡಬಹುದು ಎಂದರು.
ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಚಾರ ಗ್ರಾಪಂ ಸದಸ್ಯೆ ಶಶಿಕಲಾ, ವಲಯ ಮೇಲ್ವಿಚಾರಕಿ ರೇವತಿ, ತಾಲೂಕು ಸಿ.ಎಸ್.ಸಿ ನೋಡಲ್ ಅಧಿಕಾರಿ ಪ್ರವೀಣ್, ಕಚೇರಿ ಪ್ರಬಂಧಕಿ ಪ್ರಮೀಳಾ, ಸೇವಾಪ್ರತಿನಿಧಿ ಲತಾ, ಲಲಿತಾ, ಶ್ರೀಲತಾ, ಅಮೃತಾ, ಸುವಿದಾ ಸಹಾಯಕ ಶಂಕರ್ ದೇವಾಡಿಗ ಇದ್ದರು.