ಮಂಗಳೂರು: ಮನೆ ಬಿಟ್ಟು ಏಕಾಏಕಿ ನಾಪತ್ತೆಯಾಗಿ ಮನೆಯವರ, ಊರವರ ಹಾಗೂ ಪೊಲೀಸರ ನಿದ್ದೆಗೆಡಿಸಿದ್ದ ದಿಗಂತ್ ಪ್ರಕರಣ ಸುಖ್ಯಾಂತ್ಯಗೊಂಡಿದ್ದು, ಪ್ರಸ್ತುತ ಬೋಂದೆಲ್‌ನ ಬಾಲಮಂದಿರದಲ್ಲಿ ದಿಗಂತ್‌ಗೆ ಕೌಸ್ಸಿಲಿಂಗ್ ಮಾಡಲಾಗಿದೆ.
ದಿಗಂತ್‌ನನ್ನು ಪ್ರಾಥಮಿಕ ವಿಚಾರಣೆ ನಡೆಸಿ ಸಿಡಬ್ಲ್ಯೂಸಿ(ಮಕ್ಕಳ ಕಲ್ಯಾಣ ಸಮಿತಿ) ಮುಂದೆ ಹಾಜರುಪಡಿಸಿ ಬೊಂದೇಲ್‌ನ ಬಾಲಕರ ಮಂದಿರಕ್ಕೆ ಹಸ್ತಾಂತರಿಸಲಾಗಿತ್ತು. ಬಾಲಕನ ನಾಪತ್ತೆ ಬಗ್ಗೆ ಹೈಕೋರ್ಟ್‌ಗೆ ಆತನ ಹೆತ್ತವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿರುವುದರಿಂದ ಆತನನ್ನು ಮಾ.12ರಂದು ಬೆಂಗಳೂರಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಬಳಿಕ ನ್ಯಾಯಾಲಯ ನಿರ್ದೇಶನದಂತೆ ಆತನ ಮನೆಗೆ ಅಥವಾ ಹಾಸ್ಟೆಲ್‌ಗೆ ಕಳುಹಿಸಲಾಗುವುದು. ಅಲ್ಲಿವರೆಗೆ ಆತ ಬಾಲಮಂದಿರದಲ್ಲಿ ಇರಲಿದ್ದು, ಆತನಿಗೆ ತಜ್ಞರು ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.
ಕಲಿಕೆಯಲ್ಲಿ ಹುಷಾರಿದ್ದ ದಿಗಂತ್ ಪರೀಕ್ಷೆ ಎದುರಿಸುವಲ್ಲಿ ಚಿಂತಾಗ್ರನಾಗಿದ್ದ, ಇದೇ ಚಿಂತೆ ಮನೆ ಬಿಟ್ಟು ಹೋಗುವಂತಾಗಿತ್ತು. ಸಧ್ಯಕ್ಕೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ದಿಗಂತ್ ಸದೃಡನಾಗಿದ್ದರೂ ಮುಂದೆ ಇಂತಹ ಯಾವುದೇ ದುರ್ಘಟನೆ ನಡೆಯದಂತೆ, ದಿಗಂತ್‌ನ ಮಾನಸಿಕ ವ್ಯವಸ್ಥೆಗೆ ಘಾಸಿಯಾಗದಂತೆ ತಡೆಯಲು ಕೌಸ್ಸಿಲಿಂಗ್ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದರಿಂದ ಪೊಲೀಸ್ ಸುಪರ್ಧಿಯಲ್ಲೇ ತಜ್ಞರು ಕೌನ್ಸಿಲಿಂಗ್ ನಡೆಸುತ್ತಿದ್ದಾರೆ.