ಕುಸಿದ ರಸ್ತೆಯಲ್ಲಿ ಓಡಾಡಲು ತೊಂದರೆ

ylp raste
Published on

ಯಲ್ಲಾಪುರ: ಪಟ್ಟಣದ ರಾಮಾಪುರದಲ್ಲಿ ರಭಸದ ಮಳೆಯಿಂದಾಗಿ ರಸ್ತೆ ಕುಸಿದು ಹೋಗಿದ್ದು, ಶಾಲಾ ವಿದ್ಯಾರ್ಥಿಗಳು ಓಡಾಡಲು ತೊಂದರೆಯಾಗಿದೆ.

ಗದ್ದೆಗಳ ನಡುವೆ ಹಾದು ಹೋದ ಕಾಲುದಾರಿಗೆ ಕಾಂಕ್ರೀಟ್ ಹಾಕಿ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಮಳೆಯ ಅಬ್ಬರಕ್ಕೆ ಕಾಂಕ್ರೀಟ್ ಕುಸಿದು ಓಡಾಡಲು ಕಷ್ಟವಾಗಿದೆ.

ಪ್ರತಿನಿತ್ಯ ಈ ಭಾಗದ ವಿದ್ಯಾರ್ಥಿಗಳು ಇದೇ ರಸ್ತೆಯಲ್ಲಿ ಶಾಲೆ, ಕಾಲೇಜ್​ಗೆ ಹೋಗಬೇಕಾಗಿದೆ. ರಸ್ತೆಯ ದುಸ್ಥಿತಿಯಿಂದಾಗಿ ಸಮಸ್ಯೆ ಉಂಟಾಗಿದೆ. ಸ್ಥಳೀಯ ಆಡಳಿತ ಈ ಬಗೆಗೆ ತುರ್ತಾಗಿ ಗಮನ ಹರಿಸಿ, ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net