ಕುಟುಂಬ ನಿರ್ವಹಣೆಗೆ ತೊಂದರೆ

ಕನಕಗಿರಿ ತಾಪಂ ಕಚೇರಿಯಲ್ಲಿ ನರೇಗಾ, ಬಿಎಫ್‌ಟಿ, ಜೆಇ, ಜಿಕೆಎಂ ಸಿಬ್ಬಂದಿ ವೇತನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಂಜುನಾಥ, ಮೌನೇಶ, ಶಿವಕುಮಾರ, ಪೂಜೇಶ, ಜಿಂಕಮ್ಮ, ಹುಲಗಪ್ಪ ಇತರರಿದ್ದರು.
ಕನಕಗಿರಿ ತಾಪಂ ಕಚೇರಿಯಲ್ಲಿ ನರೇಗಾ, ಬಿಎಫ್‌ಟಿ, ಜೆಇ, ಜಿಕೆಎಂ ಸಿಬ್ಬಂದಿ ವೇತನ ಪಾವತಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಮಂಜುನಾಥ, ಮೌನೇಶ, ಶಿವಕುಮಾರ, ಪೂಜೇಶ, ಜಿಂಕಮ್ಮ, ಹುಲಗಪ್ಪ ಇತರರಿದ್ದರು.
Published on

ಕನಕಗಿರಿ: ಕಳೆದ 6 ತಿಂಗಳಿಂದ ವೇತನ ಮಂಜೂರು ಆಗದಿರುವುದನ್ನು ಖಂಡಿಸಿ ತಾಲೂಕು ನರೇಗಾ, ಬಿಎಫ್‌ಟಿ ಹಾಗೂ ಜಿಕೆಎಂ ಸಿಬ್ಬಂದಿ ಮಂಗಳವಾರ ತಾಪಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.

ಹಿರಿಯ ಸಿಬ್ಬಂದಿ ಕನಕಪ್ಪ ಛಲವಾದಿ ಮಾತನಾಡಿ, ನರೇಗಾ, ಬಿಎಫ್‌ಟಿ, ಜೆಇ ಹಾಗೂ ಜಿಕೆಎಂ ಸಿಬ್ಬಂದಿಗೆ 6 ತಿಂಗಳಿನಿಂದ ವೇತನ ಪಾವತಿಸಿಲ್ಲ. ಮಕ್ಕಳ ಶಾಲಾ ಶುಲ್ಕ, ಕುಟುಂಬ ನಿರ್ವಹಣೆಗೆ ತೊಂದರೆಯಾಗುತ್ತಿದೆ. ವೇತನ ನಂಬಿಕೊಂಡು ಜೀವನ ನಡೆಸುವವರಿಗೆ ಸಾಲ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಸರ್ಕಾರ ಶೀಘ್ರವಾಗಿ ವೇತನ ಪಾವತಿಸಬೇಕಿದೆ ಎಂದು ಒತ್ತಾಯಿಸಿದರು. ಸಿಬ್ಬಂದಿ ಮಂಜುನಾಥ, ಮೌನೇಶ, ಶಿವಕುಮಾರ, ಪೂಜೇಶ, ಜಿಂಕಮ್ಮ, ಹುಲಗಪ್ಪ, ರಾಕೇಶ, ಲಕ್ಷ್ಮೀ, ಪಲ್ಲವಿ, ಕಸ್ತೂರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net