ನೋ ಮೋರ್ ಎಕ್ಸ್​ಕ್ಯೂಸ್ ಎಂದ ಯುವ ಕಲಾವಿದೆ

H13 NO Rape Art 1
Published on

ಹುಬ್ಬಳ್ಳಿ: ಸಮಾಜದಲ್ಲಿ ಹೆಣ್ಣಿನ ಮೇಲೆ ನಡೆಯುತ್ತಿರುವ ಅತ್ಯಾಚಾರ ಕೃತ್ಯಗಳನ್ನು ಖಂಡಿಸಿ ತನ್ನೊಳಗಿನ ಆಕ್ರೋಶದ ಜ್ವಾಲೆಯನ್ನೇ ಅಸ್ತ್ರವನ್ನಾಗಿಸಿಕೊಂಡು ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸಲು ಹುಬ್ಬಳ್ಳಿಯ ಕಲಾವಿದೆ ಭುವನೇಶ್ವರಿ ಮಂಗಳವೇಡೇಕರ ಮುಂದಾಗಿದ್ದಾರೆ.

ಅತ್ಯಾಚಾರ ಸಂತ್ರಸ್ತೆಯ ಮನಸಿನ ತುಮುಲ, ತಳಮಳ, ಜರ್ಜರಿತಗೊಂಡಿರುವ ಮನಸು, ಜಗದ ಮೇಲಿನ ಸಿಟ್ಟು, ಜೀವನವೇ ಸಾಕು ಎನ್ನುವಂಥ ಭಾವನೆಗಳನ್ನು ಹೊರ ಸೂಸುವ ರೀತಿಯ ಛಾಯಾಚಿತ್ರಗಳ ಮೂಲಕ ಭುವನೇಶ್ವರಿ ಅತ್ಯಾಚಾರಿಗಳ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಬೆನ್ನಿನ ಮೇಲೆ ‘ನೋ ಮೋರ್ ಎಕ್ಸ್​ಕ್ಯೂಸ್’ ಎಂಬಿತ್ಯಾದಿ ಬರಹದೊಂದಿಗೆ ಅತ್ಯಾಚಾರಿಗಳ ಮೇಲಿನ ಆಕ್ರೋಶ ಹೊರಹಾಕಿದ್ದಾರೆ. ಇಂತಹ ಕೆಟ್ಟ ಸಂದರ್ಭ ಮತ್ತಾವ ಹೆಣ್ಣಿಗೂ ಬರಬಾರದು. ಆ ನಿಟ್ಟಿನಲ್ಲಿ ಹೆಣ್ಣು ಜಾಗೃತಳಾಗಬೇಕು. ಅತ್ಯಾಚಾರಿಗಳ ವಿರುದ್ಧ ಸೆಟೆದು ನಿಲ್ಲಬೇಕು ಎಂಬುದು ಈ ಜಾಗೃತಿಯ ಸಂದೇಶವಾಗಿದೆ ಎನ್ನುತ್ತಾರೆ ಭುವನೇಶ್ವರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net