ವಿಶ್ವ ಪರಿಸರ ದಿನಾಚರಣೆಗೆ ಭಿನ್ನ ಭಿನ್ನ ಚಟುವಟಿಕೆ, ಮಿಂಚಿದ ಸಂದೇಶಗಳು

11-1.jpg
Published on

ಚಿಕ್ಕಬಳ್ಳಾಪುರ: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಂಘ ಸಂಸ್ಥೆಗಳು, ಶಾಲಾ ಕಾಲೇಜುಗಳು, ವಿವಿಧ ಇಲಾಖೆಗಳು ವಿಶೇಷ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದವು

ಚಿಕ್ಕಬಳ್ಳಾಪುರ ತಾಲೂಕಿನ ಅಗಲಗುರ್ಕಿಯ ಬಿಜಿಎಸ್ ಇಂಗ್ಲೀಷ್ ಶಾಲೆಯಲ್ಲಿ ಪ್ರಕೃತಿ ಪೂಜೆಯ ಚಟುವಟಿಕೆಯೊಂದಿಗೆ ವಿಶ್ವ ಪರಿಸರ ದಿನವನ್ನು ಆಚರಿಸಲಾಯಿತು.
ಮೊದಲು ವಿದ್ಯಾರ್ಥಿಗಳು ಭಿತ್ತಿ ಫಲಕಗಳನ್ನು ಹಿಡಿದುಕೊಂಡು ಮೆರವಣಿಗೆಯಲ್ಲಿ ಸಾಗಿದರು.  ಶಾಲಾ ಆವರಣದಲ್ಲಿರುವ ಬೇವಿನಮರ, ಹಲಸಿನಮರ ಮತ್ತು ಮಾವಿನ ಮರಗಳನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಿದರು. ಪ್ರಬಂಧ ಮತ್ತು ಚಿತ್ರಕಲೆ ಸ್ಫರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಪರಿಸರ ಮತ್ತು ಮಾಲಿನ್ಯ ನಿಯಂತ್ರಣಾ ಮಂಡಳಿಯ ಕ್ಷೇತ್ರ ಸಹಾಯಕ ಸುನೀಲ್, ಬಿಜಿಎಸ್ ಶಾಲೆಯ ಪ್ರಾಂಶುಪಾಲ ಡಿ.ಸಿ ಮೋಹನ್ ಕುಮಾರ್ ಮತ್ತಿತರರು ಇದ್ದರು.

ಚಿಕ್ಕಬಳ್ಳಾಪುರ ತಾಲೂಕಿನ ಜಾಲಾರಿ ನರಸಿಂಹಸ್ವಾಮಿ ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಈಶ ಫೌಂಡೇಷನ್ ನೇತೃತ್ವದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಯಿತು.
ವಿಶ್ವ ಪರಿಸರ ದಿನಾಚರಣೆ ಅಂಗವಾಗಿ 1 ತಿಂಗಳ ಅವಧಿಯ ವಿಶೇಷ ಸೇವಾ ಚಟುವಟಿಕೆಯನ್ನು ತಾಲೂಕಿನ ಅವಲಗುರ್ಕಿಮತ್ತು ತಿಪ್ಪೇನಹಳ್ಳಿ ಗ್ರಾ.ಪಂ.ವ್ಯಾಪ್ತಿಯ 22 ಗ್ರಾಮಗಳಲ್ಲಿ ಕೈಗೊಂಡಿದ್ದು ಇದರಿಂದ ಸದ್ಗುರು ಸನ್ನಿಧಿ ಸ್ವಯಂ ಸೇವಕರು ಹಾಗೂ ಸ್ಥಳಿಯರು ಜಾಲಾರಿ ನರಸಿಂಹಸ್ವಾಮಿ ದೇವಸ್ಥಾನ ಆವರಣವನ್ನು ಸ್ವಚ್ಛಗೊಳಿಸುವುದರೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು. 40 ಚೀಲಗಳಷ್ಟು ತ್ಯಾಜ್ಯವನ್ನು, ಅದರಲ್ಲೂ ಮಾರಕ ಪ್ಲಾಸ್ಟಿಕ್ ಅನ್ನು ತೆರವುಗೊಳಿಸಲಾಯಿತು. ಹಾಗೆಯೇ ಜಾಗೃತಿ ಮೂಡಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net