

ಶಿವಮೊಗ್ಗ: ಭದ್ರಾವತಿಯ ಶಿವನಿ ಕ್ರಾಸ್ ಬಳಿ ಇರುವ ಪೆಟ್ರೋಲ್ ಬಂಕ್‌ನ ಪಕ್ಕದಲ್ಲಿ ನಿಲ್ಲಿಸಿದ್ದ ಲಾರಿಯಿಂದ ಡಿಸೇಲ್ ಕಳವು ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, 15 ಸಾವಿರ ರೂ. ಮೌಲ್ಯದ ಡಿಸೇಲ್ ಮತ್ತು 7 ಲಕ್ಷ ರೂ. ಮೌಲ್ಯದ ವಾಹನವನ್ನು ಜಪ್ತಿ ಮಾಡಿದ್ದಾರೆ.
ಶಿವಮೊಗ್ಗ ಟಿಪ್ಪುನಗರದ ಸೋನು(24)ಮತ್ತು ನೂರುಲ್ಲಾ(24) ಬಂಧಿತರು. ಇವರು ಆ.6ರಂದು ಭದ್ರಾವತಿ ಮಾವಿನಕೆರೆ ವಾಸಿ ಮಹೇಶ್ ಎಂಬುವರ ಲಾರಿಯಿಂದ ಡಿಸೇಲ್ ಕಳವು ಮಾಡಿದ್ದರು. ಈ ಬಗ್ಗೆ ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಎಎಸ್ಪಿ ಜಿತೇಂದ್ರಕುಮಾರ್ ದಯಾಮ, ಭದ್ರಾವತಿ ನಗರ ವೃತ್ತದ ಸಿಪಿಐ ಶ್ರೀಶೈಲ ಅವರ ಮೇಲ್ವಿಚಾರಣೆಯಲ್ಲಿ ಪಿಎಸ್‌ಐ ಶರಣಪ್ಪ ಹಂಡ್ರುಗಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಹಾಲಪ್ಪ, ಮದುಪ್ರಸಾದ್, ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ, ರುದ್ರಪ್ಪ ಅವರನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು. ಆರೋಪಿಗಳನ್ನು ಪತ್ತೆ ಮಾಡಿರುವ ಪೊಲೀಸರು, ಡಿಸೇಲ್ ಮತ್ತು ಒಂದು ವಾಹನವನ್ನು ಜಪ್ತಿ ಮಾಡಿದ್ದಾರೆ.