ಲಾರಿ ಚಾಲಕನಿಂದ ಡೀಸೆಲ್ ಕಳವು

Crime Logo
Published on

ಗೋಕರ್ಣ: ತಾನು ಚಲಾಯಿಸುತ್ತಿದ್ದ ಲಾರಿಯ ಡೀಸೆಲ್ ಅನ್ನು ಚಾಲಕನೇ ಕಳವು ಮಾಡಿರುವ ಬಗ್ಗೆ ಸ್ಥಳೀಯ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

ಚಾಲಕ ವಿಜಯಪುರದ ಮದರದ ಸಾಬಣ್ಣ ಹನುಮಂತ ಕನ್ನೋಳ್ಳಿ ಲಾರಿಗೆ ಮಂಗಳೂರಿನಲ್ಲಿ ತುಂಬಿಸಲಾದ 10,825 ರೂ. ಬೆಲೆಯ 120 ಲೀ. ಡೀಸೆಲ್ ಕಳವು ಮಾಡಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

ವಿಜಯಪುರದ ನಾಡಗೌಡ ರೋಡ್​ಲೈನ್ಸ್​ನಲ್ಲಿ ಚಾಲಕನಾಗಿದ್ದ ಈತ ಆ. 21ರಂದು ಮಂಗಳೂರಿನಲ್ಲಿ ಡೀಸೆಲ್ ತುಂಬಿಸಿ ಬಂದಿದ್ದು, ಆ ತರುವಾಯ ಶನಿವಾರ ಸಂಜೆ ಅದೇ ಲಾರಿಯು ಪೊಲೀಸ್ ಠಾಣಾ ವ್ಯಾಪ್ತಿಯ ಬೆಟ್ಕುಳಿ ಗ್ರಾಮದ ಎನ್​ಎಚ್ 66ರ ಮೇಲೆ ಪತ್ತೆಯಾಗಿದೆ. ಈ ಬಗ್ಗೆ ರೋಡ್​ಲೈನ್ಸ್ ಮ್ಯಾನೇಜರ್ ಆಪಾದಿತ ಚಾಲಕನ ಮೇಲೆ ಕಳ್ಳತನ ಕುರಿತು ಪ್ರಕರಣ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net