ಜಗದೀಶ್​ ಶೆಟ್ಟರ್​ ಪರ ಸೋನಿಯಾ ಗಾಂಧಿ ಪ್ರಚಾರ; ಅಸಾದುದ್ದೀನ್​ ಓವೈಸಿ ಕಿಡಿ

Sonia owaisi
Published on

ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್​ ಶೆಟ್ಟರ್​ ಪರ ಕಾಂಗ್ರೆಸ್​ ಅಧಿನಾಯಕಿ ಸೋನಿಯಾ ಗಾಂಧಿ ಪ್ರಚಾರ ಮಾಡಿರುವುದು ಖಂಡನೀಯ ಎಂದು AIMIM ಪಕ್ಷದ ಮುಖ್ಯಸ್ತ ಅಸಾದುದ್ದೀನ್​ ಓವೈಸಿ ಹೇಳಿದ್ಧಾರೆ.

ಈ ಕುರಿತು ಮಾತನಾಡಿದ ಓವೈಸಿ RSS ಹಿನ್ನಲೆಯಿಂದ ಬಂದ ವ್ಯಕ್ತಿಯ ಪರ ಸೋನಿಯಾ ಗಾಂಧಿ ಅವರು ಪ್ರಚಾರ ಮಾಡಿರುವುದನ್ನು ಖಂಡಿಸಿದ್ದಾರೆ.

ನಿರೀಕ್ಷಿಸಿರಲಿಲ್ಲ

ಈ ಕುರಿತು ಹುಬ್ಬಳ್ಳಿಯಲ್ಲಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಓವೈಸಿ ಮೊದಲಿಗೆ ಕಾಂಗ್ರೆಸ್​ ಪಕ್ಷ ಯಾವ ತರತ್ವ ಸಿದ್ದಾಂತದ ನಂಬಿಕೆ ಇಟ್ಟಿದೆ ಎಂಬುದನ್ನು ಖಚಿತಪಡಿಸಬೇಕು.

ಆರ್​ಎಸ್​ಎಸ್​ ಹಿನ್ನೆಲೆಯಿಂದ ಬಂದ ಜಗದೀಶ್​ ಶೆಟ್ಟರ್​ ಪರ ಸೋನಿಯಾ ಗಾಂಧಿ ಪ್ರಚಾರ ಮಾಡುತ್ತಾರೆ ಎಂದು ನಿರೀಕ್ಷಿಸಿರಲಿಲ್ಲ. ಇದೇನಾ ನಿಮ್ಮು ಸೆಕ್ಯೂಲರ್​ ತತ್ವ ನೀತಿಗಳು ಮೋದಿ ವಿರುದ್ಧ ಹೋರಾಡುವುದು ಹೀಗೆಯೇ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಬಿ ಟೀಂ

ಸೈದ್ಧಾಂತಿಕ ಹೋರಾಟದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್​ ವಿಫಲವಾಗಿರುವುದು ನಾಚಿಕೆಗೇಡಿನ ಸಂಗತಿ. ಅವರ ಪಕ್ಷದ ಗುಲಾಮರು ಹಾಗೂ ಜೋಕರ್​ಗಳು ನನ್ನ ಮೇಲೆ ಆರೋಪ ಮಾಡುತ್ತಾರೆ.

ಕಾಂಗ್ರೆಸ್​ ಬಿಜೆಪಿಯ ಬಿ ಟೀಂ ರೀತಿ ವರ್ತಿಸುತ್ತಿದೆ ಮತ್ತು ನಮ್ಮ ಪಕ್ಷದ ಮೇಲೆ ಅವರ ಸದಸ್ಯರು ಆರೋಪ ಮಾಡುತ್ತಿದ್ದಾರೆ ಎಂದು ಅಸಾದುದ್ದೀನ್​ ಓವೈಸಿ ವಾಗ್ದಾಳಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net