

ಸಿರವಾರ: ತಾಲೂಕಿನ ಅತ್ತನೂರು ಗ್ರಾಮದ ಆರಾಧ್ಯದೈವ ದಿಡ್ಡಿ ಬಸವೇಶ್ವರ ಜಾತ್ರೆ ನಿಮಿತ್ತ ಮಂಗಳವಾರ ಅದ್ದೂರಿಯಾಗಿ ಜೋಡು ರಥೋತ್ಸವ ಜರುಗಿತು. ಬೆಳಗ್ಗೆ ಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಭಕ್ತರಿಂದ ಹರಕೆ ಸಲ್ಲಿಸುವುದು ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸಂಜೆ ಪಲ್ಲಕ್ಕಿ ಸೇವೆ ನಂತರ ಜೋಡು ರಥೋತ್ಸವ ನೆರವೇರಿತು.
ಇದನ್ನೂ ಓದಿ:ಚಿಕ್ಕಬೆಣಕಲ್ನಲ್ಲಿ ಜೋಡು ರಥೋತ್ಸವ ಅದ್ದೂರಿ
ನೀಲಗಲ್ ಬೃಹನ್ಮಠದ ಡಾ.ಪಂಚಾಕ್ಷರಿ ಶಿವಾಚಾರ್ಯರು, ರಾಯಚೂರು-ಅತ್ತನೂರು ಸೋಮವಾರಪೇಟೆ ಹಿರೇಮಠದ ರಾಚೋಟಿವೀರ ಶಿವಾಚಾರ್ಯರು, ಗಬ್ಬೂರು ಬೂದಿಬಸವ ಶಿವಾಚಾರ್ಯರು, ನವಲಕಲ್ ಬೃಹನ್ಮಠದ ಅಭಿನವ ಸೋಮನಾಥ ಶಿವಾಚಾರ್ಯರು, ಮಾನ್ವಿ ಕಲ್ಮಠದ ವಿರೂಪಾಕ್ಷ ಪಂಡಿತಾರಾಧ್ಯ ಶಿವಾಚಾರ್ಯರು, ಸುಲ್ತಾನಪುರದ ಶಂಭು ಸೋಮನಾಥ ಶಿವಾಚಾರ್ಯರು, ಕ್ಷೀರಲಿಂಗ ಸ್ವಾಮೀಜಿ ಚೇಗುಂಟ ಇತರರಿದ್ದರು.