ಇಂದಿರಾಗಾಂಧಿಯಿಂದ ಆಗದ್ದು., ಸಿದ್ದು, ಡಿಕೆಶಿಯಿಂದ ಆದೀತೇ?

pwd minister cc patil
Published on


ನರಗುಂದ: ಹಿಂದು ಸಂಘಟನೆ ಬ್ಯಾನ್ ಮಾಡಲು ಬಲಿಷ್ಠ ಎನಿಸಿದ್ದ ಇಂದಿರಾಗಾಂಧಿ ಅವರಿಂದಲೇ ಸಾಧ್ಯವಾಗಲಿಲ್ಲ. ಇನ್ನು ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ ಯಾವ ಲೆಕ್ಕ. ಧೈರ್ಯ ಇದ್ದರೆ ಕಾಂಗ್ರೆಸ್ ಸಹೋದರ ಸಂಸ್ಥೆ ಎನಿಸಿರುವ ಪಿಎಫ್‌ಐ ಬ್ಯಾನ್ ಮಾಡಲಿ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಕಾಂಗ್ರೆಸ್‌ಗೆ ಸವಾಲು ಹಾಕಿದರು.
೨೦೧೮ರಲ್ಲಿ ಲಿಂಗಾಯತ ಧರ್ಮ ಒಡೆಯಲು ಹೋಗಿದ್ದ ಕಾಂಗ್ರೆಸ್ ಪಕ್ಷ ಆಗ ತನ್ನ ಕೈಯನ್ನು ತಾನೇ ಸುಟ್ಟುಕೊಂಡಿತ್ತು. ಈಗ ೨೦೨೩ರಲ್ಲಿ ಬಜರಂಗದಳ ಬ್ಯಾನ್ ಮಾಡುತ್ತೇನೆ ಎಂದು ಹೇಳಿ ಮತ್ತೆ ಕೈಸುಟ್ಟುಕೊಳ್ಳುವ ಹಂತಕ್ಕೆ ತಲುಪಿದ್ದಾರೆ ಎಂದರು.
ನರಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ತಲೆ ಕೆಟ್ಟಿದೆ. ನಾವು ಅಧಿಕಾರಕ್ಕೆ ಬರಲು ಶ್ರಮ ಪಡುತ್ತಿದ್ದೇವೆ. ಆದರೀಗ ಬಜರಂಗದಳದ ಬ್ಯಾನ್ ಹೇಳಿಕೆಯಿಂದ ಯಾವುದೇ ಶ್ರಮವಿಲ್ಲದೆ ಹಾಗೆಯೇ ನಮ್ಮನ್ನು ಅಧಿಕಾರಕ್ಕೆ ಕೂರಿಸಲು ಕಾಂಗ್ರೆಸ್ ಪಕ್ಷವೇ ಪ್ರಯತ್ನ ಪಡುತ್ತಿದೆ ಎಂದು ಕುಟುಕಿದರು.
ಅಂಜನಾದ್ರಿ ಬೆಟ್ಟ ಹನುಮನ ಜನ್ಮ ಸ್ಥಳ. ಇದು ನಮ್ಮ ಪ್ರತಿಷ್ಠೆಯ ಪ್ರಶ್ನೆ. ಹಿಂದುಗಳ ಸ್ವಾಭಿಮಾನದ ಪ್ರಶ್ನೆ. ಇದನ್ನು ಕೆದಕಿ ಕಾಂಗ್ರೆಸ್ ಕೈ ಸುಟ್ಟುಕೊಂಡಿದೆ. ಹನುಮಾನ್ ಚಾಲೀಸಾ ಈಗ ಅಲ್ಲ. ಮೊದಲಿನಿಂದಲೂ ಪಠಣ ಮಾಡಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರೂ ಹನುಮಾನ ಚಾಲೀಸಾ ಪಠಣ ಮಾಡುತ್ತಾರೆ. ನಾವು ಪಠಣ ಮಾಡುತ್ತೇವೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net