ನೇತಾಜಿ ಜೀವನ ನಮ್ಮೆಲ್ಲರಿಗೆ ಸ್ಪೂರ್ತಿ

2301-Kpl-Ravi-2
Published on

ಕೊಪ್ಪಳ: ಭಾರತಕ್ಕೆ ಜೈ ಹಿಂದ್​ ಎಂಬ ಘೋಷವಾಕ್ಯ ನೀಡಿದ ನೇತಾಜಿ ಸುಭಾಷಚಂದ್ರ ಬೋಸ್​ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದರು ಎಂದು ಹಿರಿಯ ವರದಿಗಾರ ಶರಣಪ್ಪ ಬಾಚಲಾಪುರ ಹೇಳಿದರು.

ನಗರದ ಸರಸ್ವತಿ ವಿದ್ಯಾಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನೇತಾಜಿ ಸುಭಾಷಚಂದ್ರ ಬೋಸ್​ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬ್ರಿಟಿಷರನ್ನು ಭಾರತದಿಂದ ಹೊಡೆದೊಡಿಸಿ ಭಾರತ ಮಾತೆಯನ್ನು ಬಂಧನದಿಂದ ಮುಕ್ತಗೊಳಿಸಬೇಕೆಂಬುದು ಬೋಸ್​ ಕನಸಾಗಿತ್ತು. ಮಂದಗಾಮಿಗಳು, ತೀವ್ರಗಾಮಿಗಳು ಬಣದ ಹೋರಾಟ ಭಿನ್ನವಾಗಿದ್ದರೂ ಗುರಿ ಒಂದೇ ಆಗಿತ್ತು. ನೇತಾಜಿ ಜೀವನ ಸದಾ ನಮಗೆ ಸ್ಪೂರ್ತಿ. ಅವರ ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಮಕ್ಕಳು ಅನೇಕ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ ಎಂದು ಕಳವಳ ವ್ಯಕ್ಯಪಡಿಸಿದರು.

ವಿದ್ಯಾರ್ಥಿಗಳಾದ ಅರ್ಪಿತಾ, ಸಂಗೀತಾ, ಶಿವಪ್ರಸಾದ, ಪೃಥ್ವಿರಾಜ್​ ನೇತಾಜಿ ಬಗ್ಗೆ ಮಾತನಾಡಿದರು. ಆಡಳಿತಾಧಿಕಾರಿ ಆರ್​.ಎಚ್​.ಅತ್ತನೂರು, ಮುಖ್ಯ ಶಿಕ್ಷಕಿ ರೇಣುಕಾ ಅತ್ತನೂರು, ಶಿಕ್ಷಕರಾದ ಅನೀಶ್​, ಲಕ್ಷಿ$್ಮ, ತಮನ್ನಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net