ಅತಿಸಾರ ಭೇದಿಯ ಅರಿವು ಮೂಡಿಸಿ

Untitled design
ದೇವದುರ್ಗ ತಾಲೂಕು ದೇವರಗುಂಡಗುರ್ತಿಯಲ್ಲಿ ಅತಿಸಾರ ಭೇದಿ ನಿಯಂತ್ರಣ ಕುರಿತು ಭಿತ್ತಿ ಪತ್ರ ಪ್ರದರ್ಶಿಸಲಾಯಿತು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ, ಆರೋಗ್ಯ ನಿರೀಕ್ಷಣಾಧಿಕಾರಿ ಮೈನುದ್ದೀನ್, ಪಿಎಚ್‌ಸಿಒ ರೇಣುಕಾ, ಆಶಾ ಕಾರ್ಯಕರ್ತೆ ವಸಂತಮ್ಮ, ಅಂಗನವಾಡಿ ಕಾರ್ಯಕರ್ತೆ ಸುಮಲತಾ ಇತರರಿದ್ದರು.
Published on

ದೇವದುರ್ಗ: ನವಜಾತ ಶಿಶುವನ್ನು 28 ದಿನದವರೆಗೆ ನಿಗಾ ವಹಿಸುವ ಜತೆಗೆ ಆಸ್ಪತ್ರೆ ಹಂತದಲ್ಲಿ ಆರೈಕೆ ಮಾಡಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಗೀತಮ್ಮ ಹೇಳಿದರು.


ದೇವರಗುಂಡಗುರ್ತಿಯ ಅಂಗನವಾಡಿ ಕೇಂದ್ರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಅತಿಸಾರ ಭೇದಿ ನಿಯಂತ್ರಣ, ಔಷಧ ವಿತರಣೆ ಕಾರ್ಯಕ್ರಮದಲ್ಲಿ ಬುಧವಾರ ಮಾತನಾಡಿದರು.

ನವಜಾತ ಶಿಶುವಿನ ಆರೈಕೆ ಕೇವಲ ತಾಯಿಯ ಕರ್ತವ್ಯವಲ್ಲ. ಈ ಬಗ್ಗೆ ಮನೆಯ ಸದಸ್ಯರೂ ಕಾಳಜಿವಹಿಸಬೇಕಿದೆ. ಮಗು ಜನಿಸಿದ 2 ಗಂಟೆಯೊಳಗೆ ತಾಯಿ ಹಾಲು ನೀಡಬೇಕು. ಅತಿಸಾರ ಭೇದಿ ಕಂಡುಬಂದರೆ ವೈದ್ಯರ ಸಲಹೆ ಪಡೆಯಬೇಕು. ಒಆರ್‌ಎಸ್ ಪೌಡರ್, ಜಿಂಕ್ ಮಾತ್ರೆ ನೀಡುವ ಬಗ್ಗೆ ತಾಯಂದಿರು ಮಾಹಿತಿ ಪಡೆದಿರಬೇಕು ಎಂದರು. ಸಾರ್ವಜನಿಕರಿಗೆ ಒಆರ್‌ಎಸ್ ಪೌಡರ್, ಜಿಂಕ್ ಮಾತ್ರೆ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net