34.65 ಲಕ್ಷ ಮೌಲ್ಯದ ವಜ್ರದ ನಕ್ಲೇಸ್ ನಾಪತ್ತೆ; ಆಭರಣ ಮಳಿಗೆ ಮಾಲೀಕರಿಂದ ಕೆಲಸದಾಕೆ ವಿರುದ್ಧ ದೂರು

gold
Published on

ಬೆಂಗಳೂರು: ಆಭರಣ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ, 34.65 ಲಕ್ಷ ರೂ. ಮೌಲ್ಯದ ವಜ್ರ ಮತ್ತು ಚಿನ್ನದ ನೆಕ್ಲೇಸ್‌ನ್ನು ಕಳವು ಮಾಡಿರುವ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಧಿನಗರದ ವಿಜಯ್ ಜೇಮ್ಸ್ ಆ್ಯಂಡ್ ಜ್ಯುವೆಲರ್ಸ್‌ ನಿರ್ದೇಶಕ ಸುನೀಲ್‌ಕುಮಾರ್, ಈ ಕುರಿತು ದೂರು ಸಲ್ಲಿಸಿದ್ದಾರೆ. ಇದರ ಮೇರೆಗೆ ಆಭರಣ ಮಳಿಗೆ ಕೆಲಸದಾಕೆ ಪ್ರಿಯಾ ತ್ರಿಪಾಟಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯ್ ಜೇಮ್ಸ್ ಆ್ಯಂಡ್ ಜ್ಯುವೆಲರ್ಸ್‌ ಅಂಗಡಿಯಲ್ಲಿ ಚಿನ್ನದ ಆಭರಣ ತಯಾರಿಕೆ ಮತ್ತು ಮಾರಾಟ ಮಾಡುತ್ತಿದ್ದು, ಮೇನಲ್ಲಿ ಪ್ರಿಯಾ ತ್ರಿಪಾಟಿ ಕೆಲಸಕ್ಕೆ ಸೇರಿದ್ದಳು. ಆಗಸ್ಟ್ 11ರ ಬೆಳಗ್ಗೆ 10 ಗಂಟೆಗೆ ಪ್ರಿಯಾ ಎಂದಿನಂತೆ ಕೆಲಸಕ್ಕೆ ಬಂದಿದ್ದು, ಸಂಜೆ 7 ಗಂಟೆಗೆ ಹೋಗಬಿದ್ದ ಮಹಿಳೆ 1 ತಾಸು ಮೊದಲೇ ಅಂಗಡಿಯಿಂದ ಹೊರಟು ಹೋಗಿದ್ದಳು. ಎಂದಿನಂತೆ ಆಭರಣ ಪರಿಶೀಲನೆ ನಡೆಸಿದಾಗ 34.64 ಲಕ್ಷ ರೂ. ಮೌಲ್ಯದ ವಜ್ರದ ನೆಕ್ಲೇಸ್ ಕಾಣಿಯಾಗಿತ್ತು. ಮಾರನೇ ದಿನ ಪ್ರಿಯಾ ಕೆಲಸಕ್ಕೆ ಬಂದಾಗ ನಾಪತ್ತೆ ಆಗಿರುವ ನೆಕ್ಲೇಸ್ ತಂದುಕೊಡುವಂತೆ ಕೇಳಲಾಯಿತು.

ಆದರೆ, ಆಕೆ ನಾನು ತೆಗೆದುಕೊಂಡು ಹೋಗಿಲ್ಲ ಎಂದು ಹೇಳುತ್ತಿದ್ದಾಳೆ. ಬೆಲೆಬಾಳುವ ನಕ್ಲೇಸ್ ಪತ್ತೆ ಮಾಡಿ ಆರೋಪಿತರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಸುನೀಲ್ ಮನವಿ ಮಾಡಿದ್ದಾರೆ. ಇದರ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net