‘ಡೈಮಂಡ್ ಕ್ರಾಸ್’ ಚಿತ್ರ ಶುಕ್ರವಾರ ತೆರೆಗೆ

Published on

ಹೊಸಪೇಟೆ: ಸೈಬರ್ ಕ್ರೈಂ ಕುರಿತು ಜಾಗೃತಿ ಮತ್ತು ಕುಟುಂಬ ಸಮೇತ ವೀಕ್ಷಿಸಬಹುದಾದ ‘ಡೈಮಂಡ್ ಕ್ರಾಸ್’ ಕನ್ನಡ ಚಿತ್ರ ಜು.28ರಂದು ಬೆಂಗಳೂರು, ಹೊಸಪೇಟೆ ಸೇರಿ 88 ಕಡೆ ತೆರೆ ಕಾಣಲಿದೆ ಎಂದು ಹಿರಿಯ ನಟ ಹಾಗೂ ಚಿತ್ರದ ಸಹ ನಿರ್ಮಾಪಕ ಮಿತ್ರ ತಿಳಿಸಿದರು.

ಹೊಸ ಪ್ರಯೋಗ

ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿವಿಧ ಭಾಷೆಗಳ ಸ್ಪರ್ಧೆಯ ನಡುವೆಯೂ ಹೊಸಬರೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಹೊಸ ಪ್ರಯೋಗ ನಡೆಸಿದ್ದೇವೆ. ಮನೀಶ್ ಮೆಹ್ತಾ ನಿರ್ಮಾಣ, ರಾಮ್‌ದೀಪ್ ಆರ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ ಸೈಬರ್ ಹ್ಯಾಕ್ ವಿಷಯಾಧಾರಿತವಾಗಿದೆ. ಬ್ಯಾಂಕ್ ಅಕೌಂಟ್ ಹ್ಯಾಕ್ ಹಾಗು ಬಡ ಮತ್ತು ಜನ ಸಾಮಾನ್ಯರಿಗೆ ಏನೆಲ್ಲ ತೊಂದರೆಯಾಗುತ್ತದೆ ಎಂಬುದನ್ನು ಚಿತ್ರಿಸಲಾಗಿದೆ.

ಚಿತ್ರದ ನಾಯಕ ನಟಿ ರೂಪಿಕಾ ಮಾತನಾಡಿ, ನಾನು ಹಲವು ಚಿತ್ರಗಳಲ್ಲಿ ಬಾಲ ನಟಿಯಾಗಿ, ಕಿರು ತೆರೆ ಮತ್ತು ರಂಗಭೂಮಿ ಕಲಾವಿದೆಯಾಗಿಯೂ ಅಭಿನಯಿಸಿದ್ದೇನೆ. ಈಗ ಡೈಮಂಡ್ ಕ್ರಾಸ್ ಮೂಲಕ ಬೆಳ್ಳಿ ತೆರೆಗೆ ಕಾಲಿಡುತ್ತಿದ್ದೇನೆ. ರೊಮ್ಯಾಂಟಿಕ್, ಅಶ್ಲೀಲ ಹಾಗೂ ದ್ವಂದ್ವ ಭಾಷೆ ಸೇರಿದಂತೆ ಯಾವುದೇ ಕಮರ್ಷಿಯಲ್ ಎಲಿಮೆಂಟ್ಸ್ ಇಲ್ಲದ ವಿಭಿನ್ನ ಚಿತ್ರ ಇದಾಗಿದೆ. ಸೋಷಿಯಲ್ ನೆಟ್‌ವರ್ಕ್ ದುರ್ಬಳಕೆಯಿಂದ ಮಹಿಳೆಯ ಖಾಸಗಿ ಬದುಕಿಗೆ ಆಗುವ ತೊಂದರೆ, ಮಾನಸಿಕ ಖಿನ್ನತೆ ಮತ್ತು ಅದರಿಂದ ಕಾನೂನಾತ್ಮಕವಾಗಿ ಹೊರ ಬರುವ ಬಗ್ಗೆ ಮನಮುಟ್ಟುವಂತೆ ವಿವರಿಸಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net