ಜಿಲ್ಲಾಸ್ಪತ್ರೆಯಲ್ಲಿ ಡಯಾಲಿಸೀಸ್​ ಸೇವೆ ಮರು ಆರಂಭ

udp-dist hospital
Published on

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ತಿಂಗಳಿನಿಂದ ಸ್ಥಗಿತಗೊಂಡಿದ್ದ ಡಯಾಲಿಸೀಸ್​ ಸೇವೆ ಮರು ಆರಂಭವಾಗಿದೆ. ಮೂರು ಪಾಳಿಯಲ್ಲಿ ಡಯಾಲಿಸೀಸ್​ ಕೇಂದ್ರದಲ್ಲಿ ರೋಗಿಗಳಿಗೆ ಸೇವೆಯನ್ನು ಒದಗಿಸಲಾಗುತ್ತಿದೆ.

ಜಿಲ್ಲಾ ಅರೋಗ್ಯ ಸೊಸೈಟಿಯಿಂದ ನಾದುರಸ್ತಿಯಲ್ಲಿದ್ದ ಯಂತ್ರಗಳನ್ನು ರಿಪೇರಿ ಮಾಡಲಾಗಿದ್ದು, ಸಿಬ್ಬಂದಿಗೆ ಬಾಕಿ ಇದ್ದ ಸಂಬಳವನ್ನು ಎನ್​ಎಚ್​ಎಂ ನಿಧಿಯಿಂದ ಭರಿಸಲಾಗಿದೆ. ಪ್ರಸ್ತುತ 4 ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, 6 ತಂತ್ರಜ್ಞರು, 3 ಗ್ರೂಪ್​ ಡಿ ಸಿಬ್ಬಂದಿ ಸೇವೆಸಲ್ಲಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯಿಂದ ಒಬ್ಬರು ವೈದ್ಯರು ಹಾಗು ನರ್ಸ್​ ಮೇಲುಸ್ತುವಾರಿಯಾಗಿ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಸದ್ಯ 48 ರೋಗಿಗಳು ಜಿಲ್ಲಾಸ್ಪತ್ರೆಯಲ್ಲಿ ಡಯಾಲೀಸೀಸ್​ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಕೈಗೊಟ್ಟ ಗುತ್ತಿಗೆದಾರರು
ಜಿಲ್ಲಾಸ್ಪತ್ರೆಯಲ್ಲಿ 2022 ರಿಂದ ಇಸ್ಕ್​ ಕಾಗ್​ ಸಂಜೀವಿನಿ ಸಂಸ್ಥೆ ಡಯಾಲಿಸೀಸ್​ ಕೇಂದ್ರವನ್ನು ನಿರ್ವಹಣೆ ಮಾಡುತ್ತಿದೆ. 5 ಲ್ಯಾಬ್​ ಟೆಕ್ನೀಷನ್​, 3 ಡಿ ಗ್ರೂಪ್​ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಸಂಸ್ಥೆಗೆ ಸರ್ಕಾರದಿಂದ ಬರಬೇಕಾಗಿದ್ದ ಕೋಟ್ಯಾಂತರ ರೂ. ಬಾಕಿ ಮೊತ್ತ ಬರುವವರೆಗೆ ಡಯಾಲಿಸೀಸ್​ ಕೇಂದ್ರದಲ್ಲಿ ಕಾರ್ಯವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಬಡರೋಗಿಗಳಿಗೆ ತುಂಬಾ ತೊಂದರೆಯಾಗಿತ್ತು. ಶಾಸಕ ಯಶ್ಪಾಲ್​ ಸುವರ್ಣ ಅವರು ತಮ್ಮ ಟ್ರಸ್ಟ್​ ಮೂಲಕ ಹಣ ಭರಿಸಿ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net