ಲಯನ್ಸ್‌ನಿಂದ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ

14SOR1
ಸೊರಬ ಸಾರ್ವಜನಿಕ ಆಸ್ಪತ್ರೆಗೆ ಲಯನ್ಸ್ ಕ್ಲಬ್‌ನಿಂದ ಡಯಾಲಿಸಿಸ್ ಯಂತ್ರವನ್ನು ವಿತರಿಸಲಾಯಿತು. ಡಾ. ಎಂ.ಕೆ.ಭಟ್, ಎಚ್.ಎಸ್.ಮಂಜಪ್ಪ, ಪ್ರಭು ಸಾಹುಕಾರ್, ಪಾಣಿ ರಾಜಪ್ಪ, ಸುರೇಶ್ ಇತರರಿದ್ದರು.
Published on

ಸೊರಬ: ಲಯನ್ಸ್ ಕ್ಲಬ್‌ನಿಂದ ಶುಕ್ರವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರವನ್ನು ಕೊಡುಗೆಯಾಗಿ ನೀಡಲಾಯಿತು. ಲಯನ್ಸ್ ಜಿಲ್ಲಾ ಮಾಜಿ ಗೌರ್ನರ್ ಡಾ.ಎಂ.ಕೆ.ಭಟ್ ಯಂತ್ರವನ್ನು ವಿತರಿಸಿದರು. ಉಚಿತ ನೇತ್ರ ತಪಾಸಣಾ ಶಿಬಿರವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ಕಣ್ಣಿನಲ್ಲಿ ತೊಂದರೆ ಇರುವ ರೋಗಿಗಳನ್ನು, ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರನ್ನು ಶಿರಸಿಗೆ ಕೊಂಡೊಯ್ಯಲಾಯಿತು. ಮಾಜಿ ಗೌರ್ನರ್ ಎಚ್.ಎಸ್.ಮಂಜಪ್ಪ, ತಾಲೂಕು ಸಾರ್ವಜನಿಕ ವೈದ್ಯಾಧಿಕಾರಿ ಡಾ. ಪ್ರಭು ಸಾಹುಕಾರ್, ಪಾಣಿ ರಾಜಪ್ಪ, ಟಿ.ಆರ್.ಸುರೇಶ್, ಕೆ.ಶಿವಾನಂದ, ಕೃಷ್ಣಾನಂದ, ಸವಿತಾ ಭಟ್, ಭಾರತಿ ಹನುಮಂತಪ್ಪ, ಪ್ರತಿಮಾ, ಸುಬ್ರಹ್ಮಣ್ಯ, ಚಂದ್ರಶೇಖರ ಹಾಗೂ ಆರೋಗ್ಯ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net