

ಹುಬ್ಬಳ್ಳಿ: ಮಹಿಳೆಯರು ನಿತ್ಯ ಎದುರಿಸುವ ಸೈಬರ್ ಕ್ರೖೆಂ ಸಮಸ್ಯೆಗಳ ಕುರಿತು ಮುಕ್ತ ಸಂವಾದ ಕಾರ್ಯಕ್ರಮವನ್ನು ಜೂ. 30ರಂದು ಬೆಳಗ್ಗೆ 11.30ಕ್ಕೆ ನಗರದ ಕನಕದಾಸ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕನ್ನಡ ಚುಟುಕು ಸಾಹಿತ್ಯ ಪರಿಷತ್ ಹುಬ್ಬಳ್ಳಿ ತಾಲೂಕು ಮಟ್ಟದ 11ನೇ ಸಮ್ಮೇಳನ ಅಂಗವಾಗಿ ಈ ಸಂವಾದ ಏರ್ಪಡಿಸಲಾಗಿದೆ. ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಪಾಲ್ಗೊಳ್ಳುವರು.
ಮಹಿಳೆಯರ ಅಪರಾಧ ಹಿನ್ನೆಲೆಯ ಸಮಸ್ಯೆಗಳಿಗೆ ಪರಿಹಾರ ನೀಡುವ ಕಾರ್ಯಕ್ರಮ ಇದಾಗಿದೆ. ಆಸಕ್ತ ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಳ್ಳುವಂತೆ ಸಂಘಟಕರು ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಬೆಳಗ್ಗೆ 9.30ಕ್ಕೆ ಪಂಚಮಿ ಜನಪದ ಹಾಡುಗಳ ಸ್ಪರ್ಧೆ, ನಂತರ ಶ್ರಾವಣ ಸೊಬಗು ಚುಟುಕು ವಾಚನ ಗೋಷ್ಟಿ ಜರುಗಲಿವೆ ಎಂದು ಪ್ರಸಾರಾಂಗ ನಿರ್ದೇಶಕ ಚನ್ನಬಸಪ್ಪ ಧಾರವಾಡಶೆಟ್ರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಲೇಖಕಿ ಶಾಂತಾ ನಾಡಗೀರ ಆಯ್ಕೆಯಾಗಿದ್ದಾರೆ. ಸಮಾರಂಭವನ್ನು ಕನಕದಾಸ ಶಿಕ್ಷಣ ಸಂಸ್ಥೆಯ ರವಿ ದಂಡೀನ ಉದ್ಘಾಟಿಸುವರು.
ರಮೇಶ ಮಹದೇವಪ್ಪ, ಡಾ. ಸಂದೀಪ ಬೂದಿಹಾಳ, ಕೃಷ್ಣಮೂರ್ತಿ ಕುಲಕರ್ಣಿ, ವಿ.ಜಿ. ಪಾಟೀಲ, ಮುಂತಾದವರು ಪಾಲ್ಗೊಳ್ಳುವರು.