ದ್ವಿಭಾಷಾ ನೀತಿ ಕಾಂಗ್ರೆಸ್, ಬಿಜೆಪಿಗೆ ಬೇಕಿಲ್ಲ: ಚಿಂತಕ ನಾಗೇಗೌಡ ಕೀಲಾರ ವಾಗ್ದಾಳಿ

Dialogue on bilingual policy Mandya
Published on

ಮಂಡ್ಯ: ತಮಿಳುನಾಡು ದ್ವಿಭಾಷಾ ನೀತಿಯನ್ನು ದಕ್ಕಿಸಿಕೊಳ್ಳುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಥವಾ ಬಿಜೆಪಿಗೆ ಇದು ಬೇಕಿಲ್ಲ. ಹಾಗಾಗಿ ಏಳು ಕೋಟಿ ಕನ್ನಡಿಗರು ಬೀದಿಗಿಳಿಯದಿದ್ದರೆ ದ್ವಿಭಾಷಾ ಹಕ್ಕು ಸಿಗಲ್ಲ ಎಂದು ಚಿಂತಕ ನಾಗೇಗೌಡ ಕೀಲಾರ ಅಭಿಪ್ರಾಯಪಟ್ಟರು.

ನಗರದ ಬಾಲಭವನದಲ್ಲಿ ’ಎರಡು ನುಡಿ-ಜಾಗೃತಿಯ ಕಿಡಿ’ ಎಂಬ ಘೋಷಣೆಯೊಂದಿಗೆ ಆಯೋಜಿಸಿದ್ದ ’ದ್ವಿಭಾಷಾ ನೀತಿ ಜಾರಿಗಾಗಿ ಸಂವಾದದಲ್ಲಿ ಮಾತನಾಡಿದ ಅವರು, ಭಾರತದಲ್ಲಿ ಹಲವು ಭಾಷೆಗಳು ಕೂಡಿ ಅಧಿಕಾರ ರಾಷ್ಟ್ರೀಯತೆಯಾಗಿದೆ. ನಮ್ಮ ಆಳ್ವಿಕೆಯನ್ನು ನಾವೇ ಮಾಡಿಕೊಳ್ಳುತ್ತೇವೆ. ಹಾಗೂ ಬ್ಯಾಂಕಿಂಗ್ ಸೇವೆ, ಶಿಕ್ಷಣ ವ್ಯವಸ್ಥೆಯನ್ನು ನಾವೇ ನೋಡಿಕೊಳ್ಳುತ್ತೇವೆ ಎನ್ನುವ ಉದ್ದೇಶವಿಟ್ಟುಕೊಳ್ಳಬೇಕು. ಈಗ ಇರುವ ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ದ್ವಿಭಾಷಾ ನೀತಿ ಬರುವುದು ಸಾಧ್ಯವೇ ಇಲ್ಲ. ಹಾಗಾಗಿ ರಾಜಕೀಯ ಸಂಘರ್ಷ ಹುಟ್ಟುಹಾಕಬೇಕು. ಆ ಮೂಲಕ ನ್ಯಾಯ ಪಡೆದುಕೊಳ್ಳಬೇಕು’ ಎಂದರು.

ಸಾಂವಿಧಾನಿಕವಾಗಿ ಶಿಕ್ಷಣ ಎನ್ನುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಿಜವಾದ ಬದ್ಧತೆ ಇದ್ದಿದ್ದರೆ ಸ್ಟೇಟ್ ಬೋರ್ಡ್, ಸಿಬಿಎಸ್‌ಇ, ಐಸಿಐಸಿಐ ಬೋರ್ಡ್ ಎನ್ನುವುದು ಕನಿಷ್ಟ ಪಿಯುಸಿವರೆಗಾದರೂ ಇರಬಾರದಿತ್ತು. ಇದರಲ್ಲಿ ಸರ್ಕಾರವೇ ನಡೆಸುವ ಶಿಕ್ಷಣ ಆಗಬೇಕಿತ್ತು ಎಂದರು.

ಜಿಲ್ಲಾಧಿಕಾರಿ ಕುಮಾರ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿದರು. ವಕೀಲರಾದ ಬಿ.ಟಿ.ವಿಶ್ವನಾಥ್, ರಮೇಶ್‌ಗೌಡ, ಮುಖಂಡರಾದ ಮುಕುಂದ, ಚಂದ್ರು, ವಿನಯ್‌ಕುಮಾರ್, ಶ್ಯಾಮ್‌ಪ್ರಸಾದ್, ನವೀನ್‌ಕುಮಾರ್, ಜಯರಾಂ, ಮಂಗಲ ಶಿವಣ್ಣ, ಸತೀಶ್ ಜವರೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net