ಡಯಾಗ್ನಾಸ್ಟಿಕ್ ಮೈಕ್ರೋಸ್ಕೊಪಿ ಸೆಂಟರ್‌ಗೆ ಕರೊನ ಭಯ

TB new
Published on

ಶ್ರವಣ್ ಕುಮಾರ್ ನಾಳ, ಪುತ್ತೂರು

ಕರೊನಾ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ದಂತ ವೈದ್ಯಕೀಯ, ಇಎನ್‌ಟಿ ವಿಭಾಗ ಸ್ಥಗಿತಗೊಂಡರೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಟಿಬಿ ಕ ಪರೀಕ್ಷೆ ನಡೆಸುವ ಡಯಾಗ್ನಾಸ್ಟಿಕ್ ಮೈಕ್ರೋಸ್ಕೊಪಿ ಸೆಂಟರ್ ಮುಚ್ಚಲು ಇನ್ನೂ ಆದೇಶ ನೀಡಿಲ್ಲ. ಕರೊನಾ ಮುಂಜಾಗ್ರತಾ ಸಾಧನಗಳಿಲ್ಲದೆ ಟಿಬಿ ಕ ಪರೀಕ್ಷೆ ಭಯದ ನಡುವೆಯೇ ನಿರ್ವಹಿಸಲಾಗುತ್ತಿದೆ.

ಕ್ಷಯ ರೋಗ ಪತ್ತೆ ಪರೀಕ್ಷೆಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಆರೋಗ್ಯ ಇಲಾಖೆಯ ಕ್ಷಯ ರೋಗ ವಿಭಾಗ ಆದೇಶ ನೀಡಿದೆ. ಪ್ರತಿ ಆರೋಗ್ಯ ಕೇಂದ್ರದಲ್ಲೂ ಟಿಬಿ ರೋಗಿಗಳು ಕೆಮ್ಮಿಯೇ ಕ ನೀಡಿ ಪರೀಕ್ಷೆ ನಡೆಸಲಾಗುತ್ತಿದೆ. ಕ ಪರೀಕ್ಷೆಗೆಂದೇ ಆರೋಗ್ಯ ಕೇಂದ್ರದಲ್ಲಿ ಡಯಾಗ್ನಾಸ್ಟಿಕ್ ಮೈಕ್ರೋಸ್ಕೊಪಿ ಸೆಂಟರ್ ಲ್ಯಾಬ್ ಇದೆ. ಪ್ರಸ್ತುತ ದ.ಕ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕರೊನಾ ಸೋಂಕು ಕಂಡುಬಂದ ಬಳಿಕವೂ ಇಲ್ಲಿನ ಸಿಬ್ಬಂದಿಗೆ ಮುಂಜಾಗ್ರತಾ ಕಿಟ್, ರಕ್ಷಾ ಕವಚ, ವಿಶೇಷ ಸಾಧನ ನೀಡಿಲ್ಲ.

ಕ ಪರೀಕ್ಷೆ ಅನಿವಾರ್ಯ ಅಲ್ಲ: ಕ್ಷಯ ರೋಗ ಪತ್ತೆ ಹಚ್ಚಲು ಕ ಪರೀಕ್ಷೆ ಅನಿವಾರ್ಯ ಅಲ್ಲ. ಆದರೆ ಇದೊಂದು ಸುಲಭ ಹಾಗೂ ಕಡಿಮೆ ಖರ್ಚಿನಲ್ಲಿ ರೋಗ ಪತ್ತೆ ಹಚ್ಚುವ ವಿಧಾನ. ಸ್ಕ್ಯಾನಿಂಗ್ ಮೂಲಕವೂ ಪತ್ತೆ ಹಚ್ಚಲು ಸಾಧ್ಯವಿದ್ದು, ಇದು ಸುರಕ್ಷಿತ ವಿಧಾನ. ಶ್ವ್ವಾಸಕೋಶದ ಕ್ಷಯ ಪತ್ತೆಗೆ ಸ್ಕ್ಯಾನಿಂಗ್ ಅಥವಾ ಕ ಪರೀಕ್ಷೆ ನಡೆಸಬಹುದು, ಶ್ವಾಸಕೋಶೇತರ ಕ್ಷಯ ಪತ್ತೆಗೆ ಸ್ಕ್ಯಾನಿಂಗ್ ಅಥವಾ ಕ ಪರೀಕ್ಷೆ ಅಗತ್ಯವಿಲ್ಲ ಎಂದು ಈ ಹಿಂದೆ ಆರೋಗ್ಯ ಇಲಾಖೆಯ ಸುತ್ತೋಲೆ ನೀಡಿದೆ.

ಭಯದಲ್ಲೇ ಟಿಬಿ ಕ ಪರೀಕ್ಷೆ

ಶ್ವಾಸಕೋಶ, ಕೆಮ್ಮು, ಕ ಬಾಧೆ ಹೊಂದಿರುವ ವ್ಯಕ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಾಗ ಮೊದಲಿಗೆ ನಡೆಸುವುದು ಕ್ಷಯ ರೋಗ ಪರೀಕ್ಷೆ. ದ.ಕ ಹಾಗೂ ಉಡುಪಿ ಜಿಲ್ಲೆಗಳ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸ್ಕ್ಯಾನಿಂಗ್ ವ್ಯವಸ್ಥೆ ಇಲ್ಲ, ಹಾಗಾಗಿ ನೇರವಾಗಿ ಕ ಪರೀಕ್ಷೆ ಮಾಡಲಾಗುತ್ತದೆ. ಒಂದು ವೇಳೆ ಕರೊನಾ ಸೋಂಕು ಪೀಡಿತ ವ್ಯಕ್ತಿ ಇಲ್ಲಿ ಕ ಪರೀಕ್ಷೆ ಮಾಡಿದರೆ ಕರೊನಾ ಸೋಕು ಹರಡುವ ಸಾಧ್ಯತೆ ಶೇ.100ರಷ್ಟಿದೆ. ಇಷ್ಟಿದ್ದರೂ ಸಿಬ್ಬಂದಿ ಭಯದಲ್ಲೇ ಡಯಾಗ್ನಾಸ್ಟಿಕ್ ಮೈಕ್ರೋಸ್ಕೊಪಿ ಸೆಂಟರ್‌ನಲ್ಲಿ ಕಫ ಪರೀಕ್ಷೆ ಮಾಡಬೇಕಿದೆ.

ಕ್ಷಯ ಪತ್ತೆ ಪರೀಕ್ಷೆ ಹೇಗೆ? ಕರೊನಾ ಪರೀಕ್ಷೆ ಸಂದರ್ಭ ಅತ್ಯಂತ ಭದ್ರತೆ ಹಾಗೂ ಸುರಕ್ಷಾ ವಿಧಾನ ಬಳಸಿ ಬಡ್ಸ್‌ನಂಥ ಸಾಧನದ ಮೂಲಕ ಶಂಕಿತ ಕರೊನಾ ಪೀಡಿತ ವ್ಯಕ್ತಿಯ ಗಂಟಲ ದ್ರವ ಮಾತ್ರ ಪಡೆಯಲಾಗುತ್ತದೆ. ಆದರೆ ಕ್ಷಯ ಪತ್ತೆ ಪರೀಕ್ಷೆ ಸಂದರ್ಭ ವ್ಯಕ್ತಿಯನ್ನು ಕೃತಕವಾಗಿ ಕೆಮ್ಮಿಸಿ 5ರಿಂದ 10 ಎಂಎಲ್ ಕ ಕ್ಯಾಕರಿಸಿ ತೆಗೆದು ಬಾಟಲ್ ಮೂಲಕ ಸಂಗ್ರಹಿಸಿ ಪರೀಕ್ಷೆಗೊಳಪಡಿಸಲಾಗುತ್ತದೆ.

ಕ್ಷಯ ರೋಗ ಪತ್ತೆ ಪರೀಕ್ಷೆ ನಿಲ್ಲಿಸುವಂತೆ ಆದೇಶ ಬಂದಿಲ್ಲ. ಆದರೂ ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮ ಕೈಗೊಂಡು ಪರೀಕ್ಷೆ, ಚಿಕಿತ್ಸೆ ನೀಡಲಾಗುತ್ತದೆ. ಕ್ಷಯ ರೋಗ ಪತ್ತೆ ಪರೀಕ್ಷೆ, ಚಿಕಿತ್ಸೆ ಮೊದಲೇ ಅವರ ಟ್ರಾವೆಲ್ ಇತಿಹಾಸ ಪಡೆಯುವ ಕಾರ್ಯ ನಡೆಸಲಾಗುತ್ತಿದೆ. ಡಾ.ಎಂ.ಎಸ್ ಬದ್ರುದ್ದೀನ್ ದ.ಕ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ ಕ್ಷಯ ರೋಗ ಪತ್ತೆ ಪರೀಕ್ಷೆ ಹಾಗೂ ಕರೊನಾ ವೈರಸ್ ಪತ್ತೆ ಪರೀಕ್ಷೆ ಬೇರೆ ಬೇರೆಯಾಗಿದ್ದು, ಎಲ್ಲವನ್ನೂ ಪೂರ್ವಯೋಜನೆಯಂತೆ ಅತ್ಯಂತ ಸುರಕ್ಷಿತವಾಗಿ ನಡೆಸಲಾಗುತ್ತದೆ. ಕ್ಷಯ ರೋಗ ಪತ್ತೆ ಪರೀಕ್ಷೆ ಸಂದರ್ಭ ಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿಬ್ಬಂದಿಗೆ ಮಾಹಿತಿ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದ್ದೇವೆ. ಡಾ.ಚಿದಾನಂದ್ ಉಡುಪಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net